ಮೈಸೂರು

ರನ್ ಫಾರ್ ವಾಟರ್ ಜಲ ಸಂರಕ್ಷಣೆಗಾಗಿ ಸೆ.14ಕ್ಕೆ ಜಾಥಾ

ಮೈಸೂರು,ಸೆ.13 : ಆರ್ಟ್ ಆಫ್ ಲೀವಿಂಗ್ ನಿಂದ ಸೆ.14ರಂದು ಅಂತರ ಜಲ ಸಂರಕ್ಷಣಾ ಜಾಗೃತಿ ಜಾಥಾ ‘ರನ್ ಫಾರ್ ವಾಟರ್’  ಅನ್ನು ನಗರದಲ್ಲಿ ಆಯೋಜಿಸಲಾಗಿದೆ ಎಂದು ನದಿಗಳ ಪುನಶ್ಚೇತನ ಯೋಜನಾ ನಿರ್ದೇಶಕ ನಾಗರಾಜ ಗಂಗೊಳ್ಳಿ ತಿಳಿಸಿದರು.

ಸಂಜೆ 5ಕ್ಕೆ ಕೋಟೆ ಆಂಜನೇಯ ದೇವಸ್ಥಾನದಿಂದ ಆರಂಭವಾಗುವ ಜಾಥಕ್ಕೆ ಸಂಸದ ಪ್ರತಾಪ್ ಸಿಂಹ ಹಾಗೂ ಮೇಯರ್ ಎಂ.ಜೆ.ರವಿಕುಮಾರ್ ಚಾಲನೆ ನೀಡುವರು.

ಅಂತರ್ ಜಲ ಅಭಿವೃದ್ಧಿಗಾಗಿ ವೈಜ್ಞಾನಿಕ ಯೋಜನೆಯನ್ನು ಆರ್ಟ್ ಆಫ್ ಲೀವಿಂಗ್ ನಿಂದ 2013ರಿಂದಲೂ ನಡೆಸಲಾಗುತ್ತಿದ್ದು ಯೋಜನೆಗೆ ಸಂಬಂಧಿಸಿದರೆ ರಾಜ್ಯದ ಹಾಸನ, ಚಿಕ್ಕಮಗಳೂರು ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಅಂತರ್ ಜಲ ವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡು ಸುಮಾರು 15 ಲಕ್ಷಕ್ಕೂ ಹೆಚ್ಚು ಪ್ರದೇಶಕ್ಕೆ ನೀರನ್ನು ಒದಗಿಸಲಾಗಿದೆ. ಇದರಂಗವಾಗಿ ಮೈಸೂರು ಜಿಲ್ಲೆಯಲ್ಲಿ ಯೋಜನೆಗೆ ಚಾಲನೆ ನೀಡಿ ಜಾಥಾ ಹಾಗೂ ಕಾರ್ಯಾಗಾರಗಳನ್ನು ಮಾಡುವ ಮೂಲಕ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಗುವುದು. ಈಗಾಗಲೇ ರಾಜ್ಯಾದ್ಯಂತ ನಮ್ಮ ತಂಡವೂ ಕಾರ್ಯ ಪ್ರವೃತ್ತವಾಗಿದೆ ಎಂದು ತಿಳಿಸಿದರು.

ಜಾಥಾದಲ್ಲಿ ಆರ್ಟ್ ಆಫ್ ಲೀವಿಂಗ್ ನ ಕಾರ್ಯಕರ್ತರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಳ್ಳುವರು. ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸುವುದು ಎಂದು ತಿಳಿಸಿದರು. ಪ್ರಾತ್ಯಕ್ಷಿಕೆಯನ್ನು ಬಿತ್ತರಿಸಲಾಯಿತು.

ಸುದ್ದಿಗೋಷ್ಠಿಯಲ್ಲಿ ಆರ್ಟ್ ಆಫ್ ಲೀವಿಂಗ್ ನ ಚೇತನ್ ಮಂಜುನಾಥ್, ಆನಂದ್, ನಾಗ ನಂದಿನಿ, ಹರೀಶ್ ಶಣೈ ಇದ್ದರು. (ಕೆ.ಎಂ.ಆರ್.)

Leave a Reply

comments

Related Articles

error: