ಮೈಸೂರು

ರೈತಪರ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗಲಿ: ಡಾ.ಎಚ್‍.ಸಿ. ಮಹದೇವಪ್ಪ

ಪ್ರಧಾನ ಮಂತ್ರಿ ಸಿಂಚಯೀ ಯೋಜನೆಯಲ್ಲಿ ಜಿಲ್ಲೆಯ ನೀರಾವರಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‍.ಸಿ. ಮಹದೇವಪ್ಪ ಹೇಳಿದರು.

ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ನಡೆದ ಜಿಲ್ಲಾ ನೀರಾವರಿ ಯೋಜನಾ ಸಭೆಯಲ್ಲಿ ಮಾತನಾಡಿದರು. 3823 ಕೋಟಿ ರು. ಯೋಜನೆಯಲ್ಲಿ ಮುಂದಿನ 5 ವರ್ಷ ನೀರನ್ನು ಸಮರ್ಪಕವಾಗಿ ಬಳಸಿಕೊಂಡು ಹೆಚ್ಚಿನ ಬೆಳೆ ತೆಗೆಯುವ ಯೋಜನೆ ರೂಪಿಸಲಾಗಿದೆ. ಎಲ್ಲ ಜಿಲ್ಲೆಗಳ ಯೋಜನೆಗಳನ್ನು ಸರಕಾರವು ತೀರ್ಮಾನಿಸಿ ಜಾರಿಗೊಳಿಸುವುದು ಎಂದು ತಿಳಿಸಿದರು.

ಜಿಲ್ಲಾ ನೀರಾವರಿ ಯೋಜನೆಯ ಕರಡನ್ನು ಮಂಡಿಸಿದ ಜೆಎಸ್‍ಎಸ್‍ ಸಂಸ್ಥೆಯ ಕೃಷಿ ತಜ್ಞ ಸತೀಶ್ ಚಂದ್ರ ಮಾತನಾಡಿ, ಪ್ರತಿ ಜಮೀನಿಗೆ ನೀರು ಸಿಗಬೇಕು. ಪ್ರತಿ ಹನಿ ನೀರಿಗೆ ಹೆಚ್ಚಿನ ಬೆಳೆ ಸಿಗಬೇಕು. ನೀರಾವರಿ ಯೋಜನೆಗಳನ್ನು ಶೀಘ್ರವಾಗಿ ಕಾರ್ಯರೂಪಕ್ಕೆ ತರಬೇಕು ಎಂಬ ಉದ್ದೇಶದಿಂದ ಯೋಜನೆ ರೂಪಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಒಟ್ಟು 6.76 ಲಕ್ಷ ಹೆಕ್ಟೇರ್ ಭೌಗೋಳಿಕ ಪ್ರದೇಶ ಇದ್ದು, 3.29 ಲಕ್ಷ ಹೆಕ್ಟೇರ್ ಕೃಷಿಗೆ ಯೋಗ್ಯವಾಗಿದೆ. 89 ಹೆಕ್ಟೇರ್ ಪ್ರದೇಶ ಕೃಷಿಗೆ ಯೋಗ್ಯವಾಗಿದ್ದರೂ ಬೀಳು ಬಿಡಲಾಗಿದೆ ಎಂದು ಹೇಳಿದರು.

ಶಾಸಕ ಎಂ.ಕೆ. ಸೋಮಶೇಖರ್, ಜಿಲ್ಲಾಧಿಕಾರಿ ಡಿ.ರಂದೀಪ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಸೋಮಸುಂದರ್ ಇದ್ದರು.

Leave a Reply

comments

Related Articles

error: