ಮೈಸೂರು

ತಂದೆ-ಮಗನ ಮೇಲಿನ ಹಲ್ಲೆ ಪ್ರಕರಣ : ಮತ್ತಿಬ್ಬರು ಪೊಲೀಸರ ವಶಕ್ಕೆ

ಎನ್.ಆರ್.ಮೊಹಲ್ಲಾ ತಂದೆ-ಮಗನ ಮೇಲಿನ ಹಲ್ಲೆ ಪ್ರಕರಣಕ್ಕೆ  ಸಂಬಂಧಿಸಿದಂತೆ ಇನ್ನಿಬ್ಬರು ಪೊಲೀಸರ ವಶವಾಗಿದ್ದು ಬಂಧಿತರ ಸಂಖ್ಯೆ 5 ಕ್ಕೇರಿದೆ.

ಹಲ್ಲೆ ಘಟನೆಗೆ ಸಂಬಂಧಿಸಿದಂತೆ ಎನ್.ಆರ್.ಠಾಣೆ ಪೊಲೀಸರು ಮತ್ತಿಬ್ಬರನ್ನು ಬಂಧಿಸಿದ್ದಾರೆ.  ಬಂಧಿತರನ್ನು ಮಂಡ್ಯ ನಿವಾಸಿಗಳಾದ ನಂದನ್ ರಾಜ್ ಹಾಗೂ ಶಿವಕುಮಾರ ಎಂದು ಗುರುತಿಸಲಾಗಿದೆ.

ನಂದನ್ ರಾಜ್ ಎಂಬಾತ ಮೊನಿಷಾ ಅವರ ಮನೆಯಲ್ಲಿ ಕೆಲಸಕ್ಕಿದ್ದು, ಮೊನಿಷಾ ತನ್ನ ಪ್ರೇಮಕಥೆಗೆ ಮೊಯಿನ್ ವಿರೋಧಿಸಿದ್ದ ಎಂದು ಆತನಿಗೆ ತಿಳಿಸಿದ್ದಳು. ಇದರಿಂದ ಶಿವಕುಮಾರ್ ಜತೆ ಸೇರಿ ಈ ಕೃತ್ಯ ಎಸಗಿದ್ದಾನೆಂದು ತಿಳಿದುಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಸುಪಾರಿ ನೀಡಿದ್ದ ಮೊನಿಷಾ ಮಂಜುನಾಥ್, ರಾಘವೇಂದ್ರ ಮತ್ತು ಗೌತಮ್ ಎಂಬವರನ್ನು ಪೊಲೀಸರು ಬಂಧಿಸಿದ್ದರು.

Leave a Reply

comments

Related Articles

error: