ಕರ್ನಾಟಕಪ್ರಮುಖ ಸುದ್ದಿ

ಪೊಡವಿಗೊಡೆಯನಿಗಿಂದು ಜನ್ಮೋತ್ಸವ ಸಂಭ್ರಮ…!

ರಾಜ್ಯ(ಉಡುಪಿ)ಸೆ.13:- ಪೊಡವಿಗೊಡೆಯನಿಗಿಂದು ಜನ್ಮೋತ್ಸವ ಸಂಭ್ರಮ…! ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಉತ್ಸವಕ್ಕೆ ಭರದ ಸಿದ್ಧತೆಗಳು ನಡೆದಿದ್ದು, ಈಗಾಗಲೇ ಸಹಸ್ರಾರು ಭಕ್ತರು ದೇವಳಕ್ಕೆ ಆಗಮಿಸಿ ಕೃಷ್ಣ ಸೇವೆಯಲ್ಲಿ ನಿರತರಾಗಿದ್ದಾರೆ.

ಶ್ರೀಕೃಷ್ಣ ಜನ್ಮಾಷ್ಟಮಿಗಾಗಿ ಉಡುಪಿ ರಥಬೀದಿಗಳು ಬಣ್ಣ ಬಣ್ಣದ ವಿದ್ಯುದ್ದೀಪಗಳಿಂದ ಅಲಂಕೃತಗೊಂಡಿದೆ. ಬುಧವಾರ ಶ್ರೀಕೃಷ್ಣನಿಗೆ ಪರ್ಯಾಯಶ್ರೀ ವಿಶ್ವೇಶತೀರ್ಥ ಶ್ರೀಪಾದರು ಮಂದ್ಯರಾತ್ರಿ 12.34 ಕ್ಕೆ ಅರ್ಘ್ಯ ಪ್ರದಾನ ಮಾಡಲಿದ್ದು, ಮಠವನ್ನು ವಿವಿಧ ಬಗೆಯ ಹೂಗಳಿಂದ ಅಲಂಕರಿಸಲಾಗಿದೆ. ಗುರುವಾರ ಮಹಾ ಅನ್ನ ಸಂತರ್ಪಣೆ ನಡೆಯಲಿದೆ.

ಬರುವ ಭಕ್ತಾದಿಗಳಿಗೆ ವಿತರಿಸಲು ಸಹಸ್ರಾರು ಉಂಡೆ,ಚಕ್ಕುಲಿಗಳನ್ನು ತಯಾರಿಸಲಾಗಿದೆ. ವಿಟ್ಲಪಿಂಡಿ ಉತ್ಸವಕ್ಕೆ ಭರದ ತಯಾರಿ ನಡೆದಿದ್ದು, ರಥಬೀದಿಯಲ್ಲಿ ಕಮಾನುಗಳನ್ನು ನಿರ್ಮಿಸಿ ಮೊಸರು ಕುಡಿಕೆ ಕಟ್ಟಲಾಗಿದೆ.ಗುರುವಾರ ರಥೋತ್ಸವ ಸಾಗಿ ಬರುವ ವೇಳೆ ಮೊಸರು ಕುಡಿಕೆ ಒಡೆಯಲಾಗುತ್ತದೆ. ಮೆರವಣಿಗೆಯಲ್ಲಿ ಹುಲಿವೇಷ ಹಾಗೂ ವಿವಿಧ ಕಲಾತಂಡಗಳು ಭಾಗವಹಿಸಿ ಮೆರಗು ನೀಡಲಿದ್ದು, ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಎಲ್ಲ ಎಂಟು ದ್ವಾರಗಳಲ್ಲಿಯೂ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ವಿಶೇಷ ಭದ್ರತೆ ಒದಗಿಸಲಾಗಿದೆ. (ಎಸ್.ಎಚ್)

Leave a Reply

comments

Related Articles

error: