ಕರ್ನಾಟಕಪ್ರಮುಖ ಸುದ್ದಿಮೈಸೂರು

ದಲಿತ ಮಹಿಳಾ ಸಾಹಿತ್ಯ ಸಮ್ಮೆಳನಕ್ಕೆ ಇಂದು ತೆರೆ

ದಲಿತ ಮಹಿಳಾ ಸಾಹಿತ್ಯ : ಹಿನ್ನೋಟ ಹಾಗೂ ಮುನ್ನೋಟ

xb2-jpg-pagespeed-ic-yv1piketulವಿಚಾರ ಗೋಷ್ಠಿಗಳು : ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಮೈಸೂರು ವಿವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮತ್ತು ಮಂಡ್ಯದ ಬೆಳಕು ಸಮಾಜದ ಸಂಯುಕ್ತಶ್ರಯದಲ್ಲಿ ಮಾಸನಸಗಂಗೋತ್ರಿಯ ಬಿ.ಎಂ.ಶ‍್ರೀ ಸಭಾಂಗಣದಲ್ಲಿ ಜರುಗುತ್ತಿರುವ ದಲಿತ ಮಹಿಳಾ ಸಮ್ಮೇಳನದ ಎರಡನೇ ದಿನದ (ಅ.28) ವಿಚಾರ ಗೋಷ್ಠಿಗಳು ಬೆಳಿಗ್ಗೆ 10 ಗಂಟೆಗೆ ‘ದಲಿತ ಮಹಿಳೆ : ಸಮಸ್ಯೆ – ಸವಾಲು – ಪರಿಹಾರ ಸಾಧ್ಯತೆಗಳ ಶೋಧ ವಿಷಯವಾಗಿ ಡಾ. ಸಮತಾ ಬಿ. ದೇಶಮಾನೆ, ಡಾ.ಹೆಚ್.ಎಸ್. ಅನುಪಮ ಕವಲಕ್ಕಿ, ಡಾ.ವಿಜಯಲಕ್ಷ್ಮಿ ಮನಾಪುರ ಉಪನ್ಯಾಸ ನೀಡಲಿದ್ದಾರೆ. ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಡಾ.ಧರಣಿದೇವಿ ಮಾಲಗತ್ತಿ ಉಪಸ್ಥಿತರಿರುವರು. ಡಾ.ಕಾವೇರಮ್ಮ ಪ್ರಾಸ್ತಾವಿಕವಾಗಿ ಮಹಾರಾಜ ಕಾಲೇಜಿನ ಪ್ರಾಧ್ಯಾಪಕಿ ಡಾ.ಕೆ.ಸೌಭಾಗ್ಯವತಿ ಮಾತನಾಡುವರು,

ಮಧ್ಯಾಹ್ನ 12:30 ಗಂಟೆಗೆ ನಡೆಯುವ ಸಮ್ಮೇಳನಾಧ್ಯಕ್ಷರ ಬದುಕು – ಬರಹ ಕುರಿತು ಕು.ಕ.ಅ.ಸಂಸ್ಥೆಯ ಡಾ.ಎನ್. ಚಿನ್ನಸ್ವಾಮಿ ಸೋಸಲೆ ವಿಚಾರ ಮಂಡಿಸುವರು, ಡಾ.ಜಯದೇವಿ ಗಾಯಕ್ವಾಡ್ ಅಧ್ಯಕ್ಷತೆ ವಹಿಸುವರು, ಡಾ.ಅಕ್ಕಮಹಾದೇವಿ ಪ್ರಾಸ್ತಾವಿಕ ಮಾತನಾಡುವರು, ಚಾಮರಾಜನಗರದ ಸಿ.ಎಂ.ನರಸಿಂಹ ಮೂರ್ತಿ ಮತ್ತು ತಂಡದಿಂದ ಕ್ರಾಂತಿ ಗೀತೆಗಳನ್ನು ಹಾಡುವರು.

ಕವಿ ಗೋಷ್ಠಿ : ಮದ್ಯಾಹ್ನ 2 ಗಂಟೆಗೆ ಆಹ್ವಾನಿತ ಕವಿಗಳು ಹಾಗೂ ವಿದ್ಯಾರ್ಥಿ ಕವಿಗೋಷ್ಠಿ ಜರುಗಲಿದದು ಬೆಂಗಳೂರಿನ ಸಂಸ್ಕೃತ ವಿವಿಯ ಕುಲಪತಿ ಡಾ.ಪದ್ಮಾಶೇಖರ್ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಯಾಗಿ ಪ್ರೊ.ಚ.ಸರ್ವಮಂಗಳಾ ಬಾಯಿ, ಡಾ.ಎನ್.ಕೆ.ಲೋಲಾಕ್ಷಿ ಪ್ರಾಸ್ತಾವಿಕವಾಗಿ ಮಾತನಾಡುವರು.

ಆಹ್ವಾನಿತ ಕವಿಗಳು : ಡಾ.ಮಿತದೇವನೂರು, ಮಂಜುಳ ಮಾದರ, ಕೆ.ಸೌಭಾಗ್ಯ, ಅಂಜಲಿ, ಚರಿತ, ಭುವನೇಶ್ವರಿ ಜಿ, ಮಹಾಲಕ್ಷ್ಮಿ ಎಸ್. ಹೊಸಮನೆ, ಡಾ.ನೇತ್ರವತಿ ಕುಂಬಾರಹಳ್ಳಿ, ಶಾರದ, ಲತಾ ಮನೋಹರ, ನಾಗರತ್ನ, ಆಶಾರಾಣಿ, ಡಾ.ಎಂ.ವಸಂತ ಚಿಕ್ಕತಿರುಪತಿ ಹಾಗೂ ಇತರರು ಕವನಗಳನ್ನು ವಾಚಿಸುವರು.

indexಸಮಾರೋಪ ಸಮಾರಂಭ : ಎರಡು ದಿನಗಳ ಕಾಲ ಜರುಗಿದ ದಲಿತ ಮಹಿಳಾ ಸಾಹಿತ್ಯ ಸಮ್ಮೇಳನಕ್ಕೆ ಇಂದು(ಅ.28) ಸಂಜೆ 4:30ಕ್ಕೆ ತೆರೆ ಬೀಳಲಿದ್ದು ಸಮಾರೋಪ ಸಮಾರಂಭದ ಆಧ್ಯಕ್ಷತೆಯನ್ನು ಕು.ಕ.ಅ.ಸಂಸ್ಥೆಯ ನಿರ್ದೇಶಕಿ ಪ್ರೀತಿ ಮಂಧರ್ ಕುಮಾರ್ ವಹಿಸುವರು, ಸಮ್ಮೇಳನಾಧ್ಯಕ್ಷೆ ಬಿ.ಟಿ.ಲಲಿತಾ ನಾಯಕ್ , ಮುಖ್ಯ ಅತಿಥಿಗಳಾಗಿ ನಾಡೋಜ ಪ್ರೊ.ಕಮಲಾ ಹಂಪನಾ, ಸಾಹಿತಿಗಳಾದ ಡಾ.ವಿ.ನಾಗರಾಜ, ಗಂಗಾರಾಂ ಚಂಡಾಳ, ಹಾಗೂ ಕ.ಪು.ಪ್ರಾ ಮಾರಾಟ ಪ್ರತಿನಿಧಿ ಡಿ.ನಿಂಗರಾಜು ಚಿತ್ತಣ್ಣನವರ್ ಉಪಸ್ಥಿತರಿರುವರು. ಡಾ.ಚೆನ್ನಣ್ಣ ವಾಲೀಕಾರರಿಂದ ಸಮಾರೋಪ ಭಾಷಣ, ಪ್ರಾಸ್ತಾವಿಕವಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್, ಕ್ರಾಂತಿ ಗೀತೆಗಳನ್ನು ಕಲಬುರ್ಗಿಯ ಬಲಭೀಮನೆಲೋಗಿಯವರಿಂದ.

Leave a Reply

comments

Related Articles

error: