ದೇಶ

ಕೇಂದ್ರ ಸರಕಾರಿ ನೌಕರರಿಗೆ ಶೇ.2ರಷ್ಟು ತುಟ್ಟಿ ಭತ್ಯೆ ಹೆಚ್ಚಳ

ನವದೆಹಲಿ: ಕೇಂದ್ರ ಸರಕಾರಿ ನೌಕರರಿಗೆ ಶೇ.2ರಷ್ಟು ತುಟ್ಟಿ ಭತ್ಯೆ(ಡಿಎ) ಹೆಚ್ಚಿಸುವ ಮೂಲಕ ಸರಕಾರ ದೀಪಾವಳಿ ಉಡುಗೋರೆ ನೀಡಿದೆ.

ಬುಧವಾರ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಜುಲೈ 1, 2016ರಿಂದ ಅನ್ವಯವಾಗುವಂತೆ ನೌಕರರಿಗೆ ಮತ್ತು ಪಿಂಚಣಿದಾರರಿಗೆ ಏರಿಕೆ ನೀಡಲು ಒಪ್ಪಿಗೆ ಸೂಚಿಸಲಾಯಿತು. ಸುಮಾರು 50 ಲಕ್ಷ ಸರಕಾರಿ ನೌಕರರು ಮತ್ತು 58 ಲಕ್ಷ ಪಿಂಚಣಿದಾರರು ಇದರ ಲಾಭ ಪಡೆಯಲಿದ್ದಾರೆ.

ಕೆಲ ದಿನಗಳ ಹಿಂದೆ ಶೇ.125ರಷ್ಟು ಬೇಸಿಕ್ ಆಧರಿಸಿ ಶೇ.6ರಷ್ಟು ತುಟ್ಟಿ ಭತ್ಯೆ ಏರಿಕೆ ಮಾಡಿತ್ತು. ನಂತರ 7ನೇ ವೇತನ ಆಯೋಗ ಜಾರಿ ಹಿನ್ನೆಲೆ ತುಟ್ಟಿ ಭತ್ಯೆಯನ್ನು ಬೇಸಿಕ್‍ನೊಂದಿಗೆ ಸೇರಿಸಲಾಗಿತ್ತು. ಒಪ್ಪಂದದ ದರ ಏರಿಕೆ ಹೊರತುಪಡಿಸಿ ಕೇವಲ ಚಿಲ್ಲರೆ ಹಣದುಬ್ಬರದ 12 ತಿಂಗಳ ಸರಾಸರಿ ಆಧರಿಸಿ ಸರಕಾರ ತುಟ್ಟಿಭತ್ಯೆ ಹೆಚ್ಚಳಕ್ಕೆ ಸಮ್ಮತಿಸಿತ್ತು.

Leave a Reply

comments

Related Articles

error: