Uncategorizedಪ್ರಮುಖ ಸುದ್ದಿಮೈಸೂರು

ಕಾಂಗ್ರೆಸ್ ಆರೋಪ ಸತ್ಯಕ್ಕೆ ದೂರ : ಕರ್ನಾಟಕ ದಲಿತ ವೇದಿಕೆ ಇಂಗಿತ

page3leadಹಿರಿಯ ರಾಜಕಾರಣಿ ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಅವರು ಮೌಲ್ಯಯುತ ರಾಜಕಾರಣ ನಡೆಸಿದ್ದು ದಲಿತ ಸಮುದಾಯದ ಸ್ವಾಭಿಮಾನವನ್ನು ವೈಯಕ್ತಿಕ ಬದುಕಿಗೆ ಅಡವಿಟ್ಟವರಲ್ಲ, ಕಳೆದ ಅ.23ರಂದು ನಂಜನಗೂಡಿನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಮುಖಂಡರು ಸಮಾವೇಶದಲ್ಲಿ ಪ್ರಸಾದ್ ರವರ ಬಗ್ಗೆ ಸತ್ಯಕ್ಕೆ ದೂರವಾಗಿದ್ದು ಕಾಂಗ್ರೆಸ್ ಮುಖಂಡರು ಆತ್ಮವಂಚನೆ ಮಾಡಿಕೊಂಡಿದದಾರೆ ಎಂದು ಕರ್ನಾಟಕ ದಲಿತ ವೇದಿಕೆ ಮೈಸೂರು ಘಟಕ ತಿಳಿಸಿದೆ.

ರಾಜಕಾರಣವೆಂದರೆ ಕುತಂತ್ರ, ಹಣ, ಹೆಂಡ ಜಾತಿಯನ್ನೇ ಪ್ರಮುಖವಾಗಿ ಆಸ್ತ್ರವಾಗಿ ಬಳಸಿ ಸಾಮಾಜಿಕ ಸಿದ್ಧಾಂತದ ಬಗ್ಗೆ ಮಾತಾಡುತ್ತಿರುವುದು ನಾಚಿಕೆಗೇಡು, ಸಂಪುಟ ಪುನರ್ರಚನೆ ವೇಳೆಯಲ್ಲಿ ಪಕ್ಷದ ವರಿಷ್ಠರು ಮತ್ತು ಅಧ್ಯಕ್ಷರು ಜೊತೆ ಸಮಾಲೋಚಿಸಿ ಸಚಿವರನ್ನು ಕೈಬಿಡಬೇಕಾ ಅನಿವಾರ್ಯತೆ ಇದ್ದಲ್ಲಿ ಮನವರಿಕೆ ಮಾಡಿಕೊಟ್ಟು ಕೈಬಿಡಬೇಕು ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ, ಒಕ್ಕಲಿಗರು, ಲಿಂಗಾಯಿತ ವರ್ಗದ ಪ್ರಮುಖ ನಾಯಕರು ಒಂದಾಗಿ ಬೆರೆಯದಂತೆ ತಂತ್ರಗಾರಿಕೆ ರೂಪಿಸುವ ಮೂಲಕ ಕಾಂಗ್ರೆಸ್ ನಲ್ಲಿ ತನ್ನ ಪ್ರಾಬಲ್ಯ ಮೆರೆಯುದ್ದಾರೆ ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ದೂರಿದ್ದಾರೆ.

ಶ್ರೀನಿವಾಸ ಪ್ರಸಾದ್ ರಿಂದ ತೆರವಾದ ಜಿಲ್ಲಾ ಉಸ್ತುವಾರಿಯನ್ನು ತಮ್ಮ ಹಿಂಬಾಲಕ ಸಚಿವರಿಗೆ ನೀಡುವ ಮೂಲಕ ದಲಿತ ಮುಖಂಡರಿಬ್ಬರ ಮಧ್ಯೆ ಅಸಮಧಾನದ ಹೊಗೆಯಾಡುವಂತೆ ಮಾಡಿದ್ದಾರೆ.ಕಾಂಗ್ರೆಸ್ ಪಕ್ಷ ಸಮುದ್ರವಿದ್ದಂತೆ ಶ್ರೀನಿವಾಸ ಪ್ರಸಾದ್ ಒಂದು ಚೊಂಬು ನೀರು ಇದ್ದಂತೆ ಎಂಉ ಟೀಕಿಸಿರುವ ಪರಮೇಶ್ವರ ಭ್ರಮೆಯಲ್ಲಿದ್ದು, ತತ್ವ ಸಿದ್ದಾಂತರಗಳಿಗೆ ಸಂವಿಧಾನದ ಆಶಯಗಳಿಗೆ ಬೆಲೆ ಕೊಡದೆ ಪ್ರಾಮಾಣಿಕ ನಾಯಕರುಗಳ ಬಗ್ಗೆ ತಾತ್ಸಾರದಿಂದ ನಡೆದುಕೊಳ್ಳುತ್ತಿರುವ ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಳ್ಳಲಿದೆ  ಎಂದು ವೇದಿಕೆಯ ಗೌರವಾಧ್ಯಕ್ಷ ಹೆಚ್.ಎನ್.ನಂಜುಂಡರಾಜ್ ಭವಿಷ್ಯ ನುಡಿದಿದ್ದಾರೆ. ರಾಜ್ಯಾಧ್ಯಕ್ಷ ಡಿ.ಎಸ್.ಸಿದ್ದಲಿಂಗಮೂರ್ತಿ, ಜಿಲ್ಲಾಧ್ಯಕ್ಷ ಹಿನಕಲ್ ಸೋಮು,ರಾಜ್ಯ ಪ್ರಧಾನ ಕಾರ್ಯದರ್ಶಿ ಶಂಕರ್, ರಾಜ್ಯ ಕಾರ್ಯಕಾರಿಣಿ ಸದಸ್ಯ ರೇವಣ್ಣ ನಾಗನಹಳ್ಳಿ ಹಾಗೂ ಮೈಸೂರು ತಾಲೂಕು ಅಧ್ಯಕ್ಷ ಪಿ.ಧನಂಜಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

comments

Related Articles

error: