ಮೈಸೂರು

ನಾರಾಯಣ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಉಚಿತ ಸ್ತನ ಕ್ಯಾನ್ಸರ್ ತಪಾಸಣೆ

ಮೈಸೂರಿನ ನಾರಾಯಣ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ವಿಶ್ವ ಸ್ತನ ಕ್ಯಾನ್ಸರ್ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ನವೆಂಬರ್ 2ರಿಂದ9ರವರೆಗೆ ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ಸ್ತನದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.

ಸ್ತನ ಕ್ಯಾನ್ಸರ್ ತಪಾಸಣೆಗಾಗಿ ನಾರಾಯಣ ಹೆಲ್ತ್ ಸಿಟಿ ವತಿಯಿಂದ 2014ರ ಫೆಬ್ರವರಿ 4ರಂದು ಮೊಬೈಲ್ ಮ್ಯಾಮೋಗ್ರಫಿ ಘಟಕವನ್ನೊಳಗೊಂಡ ಬಸ್ ಆಯನವನ್ನು ಪರಿಚಯಿಸಲಾಯಿತು.

ತನ್ನ ಕಾರ್ಯದಲ್ಲಿ ನಿರತವಾಗಿರುವ ಆಯನ ರಾಜ್ಯಾದ್ಯಂತ ಸುಮಾರು 260ಕ್ಕೂ ಹೆಚ್ಚು ತಪಾಸಣಾ ಶಿಬಿರವನ್ನು ನಡೆಸಿದ್ದು ಹತ್ತು ಸಾವಿರಕ್ಕೂ ಅಧಿಕ ಮಂದಿ ಇದರ ಪ್ರಯೋಜನ ಪಡೆದಿದ್ದಾರೆ. ಗ್ರಾಮೀಣ ಭಾಗದ ಜನರೇ ಇವರಲ್ಲಿ ಹೆಚ್ಚಾಗಿದ್ದು, ನಂಜನಗೂಡು, ಕೊಳ್ಳೇಗಾಲ, ಬನ್ನೂರು, ಚಾಮರಾಜನಗರ, ಮಂಡ್ಯ, ಹಾಸನ, ಕೆ.ಆರ್.ನಗರ, ಚನ್ನರಾಯಪಟ್ಟಣ, ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಲ್ಲಿಯೂ ಸಂಚರಿಸಿದ್ದು ಸುಮಾರು 2ಸಾವಿರ ಮಂದಿಯನ್ನು ತಪಾಸಣೆಗೊಳಪಡಿಸಿದೆ. 200ಕ್ಕೂ ಅಧಿಕ ಮಂದಿಗೆ ಕ್ಯಾನ್ಸರ್ ಪತ್ತೆಯಾಗಿದೆ. ಇವರಲ್ಲಿ 14 ಮಂದಿ ನಾರಾಯಣ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ತನಕ್ಯಾನ್ಸರ್ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದ್ದು, ಮುಂಚಿತವಾಗಿ ಪತ್ತೆ ಹಚ್ಚಿದಲ್ಲಿ ಸಂಪೂರ್ಣವಾಗಿ ಗುಣಪಡಿಸಿಕೊಳ್ಳಬಹುದು. ಆರೋಗ್ಯ ತಪಾಸಣಾ ಶಿಬಿರಗಳು ಸ್ತನದ ಆರೋಗ್ಯದ ಕುರಿತು ತಿಳಿದುಕೊಳ್ಳಲು ಅನುಕೂಲವಾಗಲಿದೆ. ಮುಂದುವರಿದ ತಂತ್ರಜ್ಞಾನದ ಸಹಾಯದಿಂದ ಸ್ತನ ಕ್ಯಾನ್ಸರ್ ಕಾಯಿಲೆಯನ್ನು ಸಂಪೂರ್ಣವಾಗಿ ಗುಣಪಡಿಸುವುದಲ್ಲದೇ ಸ್ತನಗಳ ಕಾಸ್ಮೆಟಿಕ್ ಮತ್ತು ಸಾಮಾನ್ಯ ಸ್ಥಿತಿಗಳು ಉತ್ತಮವಾಗಲಿದೆ ಎಂದು ನಾರಾಯಣ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯ ವೈದ್ಯೆ ಡಾ.ವೇದಪ್ರಿಯಾ ತಿಳಿಸಿದರು.

Leave a Reply

comments

Related Articles

error: