ಮೈಸೂರು

ವಿದ್ಯಾರ್ಥಿಗಳು ತಮ್ಮ ಜ್ಞಾನದ ಮಿತಿಯನ್ನು ವಿಸ್ತರಿಸಿಕೊಳ್ಳಿ : ಹೆಚ್.ಉಮೇಶ್

ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಷೇರು ಮಾರುಕಟ್ಟೆಯ ಪ್ರತಿ ಹಂತದ ಬೆಳವಣಿಗೆಯನ್ನು ಸೂಕ್ಷ್ಮದೃಷ್ಟಿಯಿಂದ ಅವಲೋಕಿಸುವ ಮೂಲಕ ತಮ್ಮ ಜ್ಞಾನದ ಪರಿಮಿತಿಯನ್ನು ವಿಸ್ತರಿಸಿಕೊಳ್ಳಬೇಕು ಎಂದು ಲೋಟಸ್ ನಾಲ್ ವೆಲ್ಸ್ ಪ್ರೈವೇಟ್ ಕಂಪನಿಯ ಚಾರ್ಟೆಡ್ ಅಕೌಂಟೆಂಟ್ ಹೆಚ್.ಉಮೇಶ್ ತಿಳಿಸಿದರು.

ಮೈಸೂರಿನ ಗೀತಾಶಿಶು ಶಿಕ್ಷಣ ಸಂಘದ ಸಿಂಹ ಸುಬ್ಬ ಮಹಾಲಕ್ಷ್ಮಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಸಂಘ ಜ್ಞಾನ ಮಂಥನ್ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಹೆಚ್.ಉಮೇಶ್ ಮಾತನಾಡಿದರು. ಷೇರು ಮಾರುಕಟ್ಟೆಯ ವಿವಿಧ ಆಯಾಮಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಬಿ.ಎಸ್.ಇ ಮತ್ತು ಅದರ ಮಾರುಕಟ್ಟೆ ಅವಕಾಶಗಳು, ಸೆಬಿ, ಈ-ಟ್ರೇಡಿಂಗ್, ಅಂತರ್ಜಾಲ ಆಧಾರಿತ ಮಾರುಕಟ್ಟೆಯ ಸಾಧಕ-ಬಾಧಕಗಳು, ಡಿಮ್ಯಾಟ್ ಮತ್ತು ಬಂಡವಾಳ ಹೂಡಿಕೆ ಮತ್ತು ಮಾರುಕಟ್ಟೆ, ಮ್ಯೂಚುಯಲ್ ಫಂಡ್ ಗಳಲ್ಲಿ ಹೂಡಿಕೆ ಮತ್ತು ಆರ್ಥಿಕ ಯೋಜನೆಗಳ ಕುರಿತು ವಿವರವಾಗಿ ತಿಳಿಸಿದರು.

ಈ ಸಂದರ್ಭ ಕಾರ್ಯಕ್ರಮ ಸಂಯೋಜಕ ಬಿ.ಕೆ.ನಟರಾಜು, ಕಾಲೇಜು ಪ್ರಾಂಶುಪಾಲ ಪ್ರಶಾಂತ ಡಿ.ಎಸ್. ಸೇರಿದಂತೆ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.

Leave a Reply

comments

Related Articles

error: