
ಮೈಸೂರು
ಔಷಧ ವಲಯದಲ್ಲಿ ಹಕ್ಕು ಸ್ವಾಮ್ಯತೆಗೆ ಸವಾಲುಗಳು : ಸೆ.15ರಂದು ವಿಚಾರಗೋಷ್ಠಿ
ಮೈಸೂರು,ಸೆ.14 : ಜಗದ್ಗುರು ಶ್ರೀಶಿವರಾತ್ರೀಶ್ವರ ವಿಶ್ವವಿದ್ಯಾಲಯದ, ಜೆ.ಎಸ್.ಎಸ್ ಪಾರ್ಮಸಿ ಕಾಲೇಜು ಹಾಗೂ ಜೆ.ಎಸ್.ಎಸ್ ಕಾನೂನು ಕಾಲೇಜು ಸಹಯೋಗದೊಂದಿಗೆ ಸೆ.16ರಂದು ಔಷಧ ವಲಯದಲ್ಲಿ ಹಕ್ಕುಸ್ವಾಮ್ಯತೆಗೆ ಸವಾಲುಗಳು ವಿಷಯವಾಗಿ ವಿಚಾರ ಗೋಷ್ಠಿಯನ್ನು ಆಯೋಜಿಸಲಾಗಿದೆ ಎಂದು ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಜಗದೀಶ್ ಎ.ಟಿ ತಿಳಿಸಿದರು.
ಗುರುವಾರ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 9 ಗಂಟೆಯಿಂದ ವಿಚಾರ ಸಂಕಿರಣದದ ನೋಂದಣಿ ಪ್ರಾರಂಭವಾಗಲಿದ್ದು, ಬೆಳಿಗ್ಗೆ 10 ಗಂಟೆಗೆ ಅಲಿನೋವ್ ರಿಸರ್ಚ್ ಅಂಡ್ ಡೆವೆಲಪ್ಮೆಂಟ್ ಪ್ರೈವೇಟ್ ಲಿಮಿಟೆಡ್ ಆಡಳಿತಾಧಿಕಾರಿ ಗೌತಮಿ ಎಸ್ ಉದ್ಘಾಟಿಸಲಿದ್ದಾರೆ ಎಂದರು.
ನಂತರ ವಿಚಾರ ಗೋಷ್ಟಿಗಳು ನಡೆಯಲಿದ್ದು, ಇಂಟರ್ ಯೂನಿವರ್ಸಿಟಿ ಸೆಂಟರ್ ಐಪಿಆರ್ ಸ್ಟಡೀಸ್ನ ಸಹಾಯಕ ಪ್ರಾಧ್ಯಾಪಕರಾದ ಮಾಧುರಿ ಆನಂದ್, ಡಾ.ಐ.ಜಿ.ರತೀಶ್, ರುಜಿತಾ ಶೆಣೈ, ವಿಚಾರ ಗೋಷ್ಠಿ ನಡೆಸಿಕೊಡಲಿದ್ದಾರೆ ಎಂದು ತಿಳಿಸಿದರು.
200 ರೂ. ಗೋಷ್ಠಿಯ ನೋಂದಣಿ ಶುಲ್ಕವಾಗಿರುತ್ತದೆ, ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯುವುದು ಎಂದರು.
ಗೋಷ್ಠಿಯಲ್ಲಿ ಜೆಎಸ್ಎಸ್ ಸಿಪಿ ಸಹಾಯಕ ಪ್ರಾಧ್ಯಾಪಕ ಡಾ.ಬಾಲಮರುಳಿಧರ ವಿ, ಡಾ.ವಿಶಾಲ್ ಕುಮಾರ್ ಗುಪ್ತಾ, ವಿಷಕಂಠೇಗೌಡ, ಕುಲಕರ್ಣಿ ಉಪಸ್ಥಿತರಿದ್ದರು. (ವರದಿ : ಕೆ.ಎಂ.ಆರ್)