ಮೈಸೂರು

‘ಪಟಾಕಿ ಬಿಡಿ, ಪರಿಸರ ಕಾಪಾಡಿ’ ಜಾಗೃತಿ ಅಭಿಯಾನ

ಅಖಿಲ ಕರ್ನಾಟಕ ಪರಿಸರ ಜಾಗೃತಿ ವೇದಿಕೆ ನೇತೃತ್ವದಲ್ಲಿ ಸ್ನೇಹ ಸಿಂಚನ ಟ್ರಸ್ಟ್, ಮೈಸೂರು ಮಹಿಳಾ ವೇದಿಕೆ, ಬಿಎನ್‍ಐ ಸಂಸ್ಥೆ, ಜೀನಿಯಸ್ ಕಾಲೇಜುಗಳ ಸಹಯೋಗದಲ್ಲಿ ಶುಕ್ರವಾರ ‘ಪಟಾಕಿ ಬಿಡಿ, ಪರಿಸರ ಕಾಪಾಡಿ’ ಜಾಗೃತಿ ಅಭಿಯಾನ ನಡೆಯಿತು.

ನ್ಯಾಯಾಲಯದ ಮುಂಭಾಗದ ಮಹಾತ್ಮ ಗಾಂಧಿ ಪ್ರತಿಮೆ ಮುಂಭಾಗದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಜಾಗೃತಿ ಜಾಥಾ ನಡೆಯಿತು.

ಪಟಾಕಿಯಿಂದಾಗುವ ಅನಾಹುತಗಳ ಬಗ್ಗೆ ಅರಿವು ಸಾರ್ವಜನಿಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಜಾಥಾ ನಡೆಸಲಾಗಿದೆ. ಪಟಾಕಿಯು ಪರಿಸರಕ್ಕೆ ಹಾನಿ ಉಂಟುಮಾಡದಂತೆ ಎಚ್ಚರ ವಹಿಸಬೇಕು. ಆರೋಗ್ಯಕರ ಸಮಾಜವನ್ನು ಮುಂದಿನ ಪೀಳಿಗೆಗೂ ನೀಡುವುದು ಪ್ರತಿಯೊಬ್ಬರ ಕರ್ತವ್ಯ. ಅಖಿಲ ಕರ್ನಾಟಕ ಪರಿಸರ ಜಾಗೃತಿ ವೇದಿಕೆಯು ಈಗಾಗಲೇ ಸಾವಿರಾರು ಗಿಡಗಳನ್ನು ಮೈಸೂರಿನ ಹಲವಾರು ಕಡೆಗಳಲ್ಲಿ ನೆಟ್ಟು ಪೋಷಿಸುತ್ತಿದ್ದು, ಇದೀಗ ಪರಿಸರ ಹಾನಿಯುಂಟು ಮಾಡುವ ಪಟಾಕಿ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ಜಾಗೃತಿ ವೇದಿಕೆ ಪ್ರಧಾನ ಕಾರ್ಯದರ್ಶಿ ಲತಾ ಮೋಹನ್ ಹೇಳಿದರು.

Leave a Reply

comments

Related Articles

error: