ಮೈಸೂರು

ನ್ಯಾನೋಟೆಕ್ನಾಲಜಿ ವಿಚಾರ ಸಂಕಿರಣ

ಮೈಸೂರಿನ ವಿದ್ಯಾವರ್ಧಕ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ರಸಾಯನಶಾಸ್ತ್ರ ವಿಭಾಗದ ವತಿಯಿಂದ ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಶನ್ ಸಹಯೋಗದಲ್ಲಿ ನ್ಯಾನೋಟೆಕ್ನಾಲಜಿ ಕುರಿತು ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು.

ಮೈಸೂರು ವಿಶ್ವವಿದ್ಯಾನಿಲಯದ ವಿಜ್ಞಾನಿ ಡಾ. ಎಸ್. ನವೀನ್ ಗೌರವ ಅತಿಥಿಯಾಗಿ ಪಾಲ್ಗೊಂಡಿದ್ದರು. ಬಳಿಕ ಮಾತನಾಡಿದ ಅವರು ನ್ಯಾನೋಟೆಕ್ನಾಲಜಿಯ ಇತಿಹಾಸ, ಕೊಡುಗೆ, ಬಳಕೆ ಮತ್ತು ಮಹತ್ವವನ್ನು ಸಂಕ್ಷಿಪ್ತವಾಗಿ ವಿವರಿಸಿದರು.

ವೈದ್ಯಕೀಯ ಸಂಶೋಧನೆಯಲ್ಲಿ ನ್ಯಾನೋಟೆಕ್ನಾಲಜಿ ಯಾವ ರೀತಿ ಬಳಕೆಯಾಗುತ್ತಿದೆ ಎಂಬುದರ ಕುರಿತೂ ವಿವರಿಸಿದರು. ವಿದ್ಯಾವರ್ಧಕ ಕಾಲೇಜ್ ಆಫ್ ಇಂಜಿನಿಯರಿಂಗ್ ನ ಪ್ರಾಂಶುಪಾಲ ಸದಾಶಿವ್ ಗೌಡ, ವಿಭಾಗದ ಮುಖ್ಯಸ್ಥೆ ಡಾ. ಅನಿತಾ ಸುಧೀರ್, ಪ್ರೊ. ಎಸ್.ಬಿ. ದೇವರಾಜು, ಡಾ. ಎನ್.ಎಸ್. ಲಿಂಗೇಗೌಡ, ಡಾ. ಎನ್. ಶ್ರೀಕಂಠಮೂರ್ತಿ, ಬಿ. ವೃಷಭೇಂದ್ರ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: