ಮನರಂಜನೆ

ಬೆಂಗಳೂರಿನಲ್ಲಿ ದೀಪಾವಳಿ ಆಚರಿಸಲಿರುವ ದೀಪಿಕಾ ಪಡುಕೋಣೆ

ಮುಂಬೈ: ಕುಟುಂಬದೊಂದಿಗೆ ಕಳೆಯುವ ಸಮಯ ಅಮೂಲ್ಯವಾಗಿದ್ದು ಈ ಬಾರಿ ದೀಪಾವಳಿಯನ್ನು ಬೆಂಗಳೂರಿನಲ್ಲಿ ಆಚರಿಸಲಿರುವುದಾಗಿ ಗುಳಿಕೆನ್ನೆ ಬೆಡಗಿ ಬಾಲಿವುಡ್-ಹಾಲಿವುಡ್ ತಾರೆ ದೀಪಿಕಾ ಪಡುಕೋಣೆ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಪೋಷಕರು ಮತ್ತು ಸಹೋದರಿ ಜತೆ ಹಬ್ಬದ ಮಧುರ ಕ್ಷಣಗಳನ್ನು ಕಳೆಯುವುದು ನನಗೆ ತುಂಬಾ ವಿಶೇಷ. ಈ ಮೂಲಕ ಕುಟುಂಬದೊಂದಿಗಿನ ಬಾಂಧವ್ಯವನ್ನು ಕಾಪಾಡಿದಂತಾಗುತ್ತದೆ ಎಂದು ತಿಳಿಸಿದ್ದಾರೆ.

ರಣವೀರ್‍ ಸಿಂಗ್‍ ಜೊತೆ ಸಂಜಯ್ ಲೀಲಾ ಬನ್ಸಾಲಿ ಅವರ “ಪದ್ಮಾವತಿ” ಸಿನಿಮಾದಲ್ಲಿ ನಟಿಸಿರುವ ದೀಪಿಕಾ, ದೀಪಾವಳಿ ದೀಪಗಳ ಮತ್ತು ಬೆಳಕಿನ ಹಬ್ಬ. ಹಬ್ಬದಲ್ಲಿ ಪಾಲ್ಗೊಳ್ಳುವುದು ನನಗೆ ಮೊದಲಿಂದಲೂ ಸಂತೋಷ ಮತ್ತು ಉಲ್ಲಾಸ ತರುತ್ತದೆ. “ಪದ್ಮಾವತಿ” ಚಿತ್ರ ಬಿಡುಗಡೆಯ ಕಾತುರ ಇದ್ದೇ ಇದೆ. ಆದರೆ ಅದಕ್ಕೆ ಮೊದಲು ಕುಟುಂಬದೊಂದಿಗೆ ಸಮಯ ಕಳೆಯುವ ಅವಕಾಶ ದೀಪವಾವಳಿಯಿಂದಾಗಿ ಒದಗಿಬಂದಿರುವುದು ಖುಷಿ ತಂದಿದೆ ಎಂದಿದ್ದಾರೆ.

ಬಾಲಿವುಡ್ ಮಾತ್ರವಲ್ಲದೇ ವಿನ್ ಡೀಸೆಲ್ ಅವರೊಂದಿಗೆ ನಟಿಸಿರುವ “ಎಕ್ಸ್ಎಕ್ಸ್ಎಕ್ಸ್: ರಿಟರ್ನ್ ಆಫ್ ಎಕ್ಸೆಂಡರ್‍ ಕೇಜ್” ಎಂಬ ಹಾಲಿವುಡ್ ಚಿತ್ರದ ಬಿಡುಗಡೆಯನ್ನು ಕೂಡ ಎದುರು ನೋಡುತ್ತಿರುವುದಾಗಿ ದೀಪಿಕಾ ತಿಳಿಸಿದ್ದಾರೆ.

Leave a Reply

comments

Related Articles

error: