ಪ್ರಮುಖ ಸುದ್ದಿಮೈಸೂರು

ಮೈಸೂರಿನಿಂದ ಚೆನ್ನೈಗೆ ತೆರಳಲು 4 ಗಂಟೆ 50 ನಿಮಿಷ ಅಷ್ಟೇ ಸಾಕು

ಮೈಸೂರು, ಬೆಂಗಳೂರು- ಚೆನ್ನೈ ಮಧ್ಯೆ 160 ಕಿಮೀ ವೇಗದ ಸೆಮಿ ಹೈಸ್ಪೀಡ್ ರೈಲು ಯೋಜನೆ ಸಿದ್ಧವಾಗಿದ್ದು, ಇದಕ್ಕೆ 4,350 ಕೋಟಿ ರುಪಾಯಿ ವೆಚ್ಚ ತಗುಲಲಿದೆ. ಈ ಸಂಬಂಧ ಕಳೆದ ವಾರ ಚೀನಾ ಕಂಪನಿಯೊಂದು ರೈಲ್ವೆ ಮಂಡಳಿಗೆ ಕಾರ್ಯಸಾಧ್ಯತಾ ಅಧ್ಯಯನ ವರದಿ ಸಲ್ಲಿಸಿದೆ.

ಮೈಸೂರಿನಿಂದ ಚೆನ್ನೈಗೆ 500 ಕಿಮೀ ದೂರ ಕ್ರಮಿಸಲು ಕೇವಲ 4 ಗಂಟೆ 45 ನಿಮಿಷ ಸಾಕು. ಪ್ರಸ್ತುತ ಈ ಮಾರ್ಗದಲ್ಲಿ ಸಂಚರಿಸುವ ಅತಿ ವೇಗದ ರೈಲು ಶತಾಬ್ದಿ ಎಕ್ಸ್ ಪ್ರೆಸ್ 7 ಗಂಟೆ ಸಮಯ ತೆಗೆದುಕೊಳ್ಳುತ್ತಿದೆ. ಮೈಸೂರಿನಿಂದ ಚೆನ್ನೈ ನಡುವಿನ ಮಾರ್ಗವನ್ನು ಮೇಲ್ದರ್ಜೆಗೇರಿಸಲು 4,350 ಕೋಟಿ ರು. ವೆಚ್ಚವಾಗುತ್ತದೆ. ಬೆಂಗಳೂರಿನಿಂದ ಚೆನ್ನೈಗೆ 3200 ಕೋಟಿ ರು. ವೆಚ್ಚವಾಗುತ್ತದೆ. ಬೆಂಗಳೂರಿನಿಂದ ಚೆನ್ನೈ ನಡುವಿನ ರೈಲು ಮಾರ್ಗವನ್ನು ಮಾತ್ರ ಮೇಲ್ದರ್ಜೆಗೇರಿಸಿದಲ್ಲಿ, 2 ಗಂಟೆ 50 ನಿಮಿಷದಲ್ಲಿ ರೈಲು ಸಂಚರಿಸಲಿದೆ ಎಂದು ವರದಿ ಸಲ್ಲಿಸಿದೆ.

ಮೈಸೂರು-ಬೆಂಗಳೂರು ಮಾರ್ಗದಲ್ಲಿ ಹೆಚ್ಚು ಗುಡ್ಡಗಳು ಇರುವುದರಿಂದ ಈ ಮಾರ್ಗವನ್ನು ಮೇಲ್ದರ್ಜೆಗೇರಿಸುವುದು ಕಷ್ಟ. ಮೊದಲ ಹಂತದಲ್ಲಿ ಬೆಂಗಳೂರು- ಚೆನ್ನೈ ಮಾರ್ಗ ಮೇಲ್ದರ್ಜೆಗೇರಲಿದೆ. ಬಳಿಕ ಬೆಂಗಳೂರು-ಮೈಸೂರು ಮಾರ್ಗ ಮೇಲ್ದರ್ಜೆಗೇರಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಚೀನಾ ಕಂಪನಿಯು ಸಲ್ಲಿಸಿರುವ ವರದಿಯಲ್ಲಿ ರೈಲ್ವೆ ಮಂಡಳಿಯು ಕೆಲ ಬದಲಾವಣೆಗಳನ್ನು ಮಾಡಿದ್ದು, ಅದನ್ನು ಪರಿಶೀಲಿಸಿ ಅಂತಿಮ ವರದಿ ನೀಡಲು ಸೂಚಿಸಿದೆ.

Leave a Reply

comments

Related Articles

error: