ಕರ್ನಾಟಕಪ್ರಮುಖ ಸುದ್ದಿ

ಈ ಬಾರಿ ಮತ್ತೆ ಕಾಂಗ್ರೆಸ್ ಅಧಿಕಾರ ಹಿಡಿಯುವುದಲ್ಲಿ ಯಾವುದೇ ಸಂದೇಹವಿಲ್ಲ : ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಜ್ಯ(ಬೆಳಗಾವಿ)ಸೆ.14:- ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರ ಉತ್ಸಾಹ ನೋಡಿ ಈ ಸಾರಿ ಸಂದೇಹ ಉಳಿದಿಲ್ಲ ನೂರಕ್ಕೆ ನೂರು ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯೇ ಗೆಲ್ಲುತ್ತಾರೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಸುಳೆಬಾವಿ ಕಾಂಗ್ರೆಸ್ ಪಕ್ಷದ ಸಮಾವೇಶದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು

ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಅವರು ಕಡಿಮೆ ಅಂತರದಿಂದ ಸೋತಿದ್ದು ದುರಾದೃಷ್ಟ. ಈ ಬಾರಿ ಅವರನ್ನು ಇಪ್ಪತ್ತು ಸಾವಿರ ಮತಗಳ ಅಂತರದಿಂದ ಗೆಲ್ಲಿಸಲೇಬೇಕು ಹೆಬ್ಬಾಳಕರ್ ಸೋತರೂ ಕ್ಷೇತ್ರವನ್ನು ಬಿಡಲಿಲ್ಲ, ಸಮಾಜ ಸೇವೆಯನ್ನು ನಿಲ್ಲಿಸಲಿಲ್ಲ. ನಾವೆಲ್ಲರೂ ಸುಳೆಬಾವಿ ಗ್ರಾಮಕ್ಕೆ ಬಂದಿದ್ದು ಲಕ್ಷ್ಮೀ ಹೆಬ್ಬಾಳಕರ ಅವರನ್ನು ಆಶಿರ್ವಾದ ಮಾಡಲೆಂದೇ ಎಂದು ಹೇಳಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೆಬ್ಬಾಳಕರ ಅವರ ಟಿಕೇಟ್ ಖಾತ್ರಿ ಪಡಿಸಿದರು

ಬಿಜೆಪಿ ಮಿಶನ್ ಒನ್ ಫಿಫ್ಟಿ,ಅಂತ ಎಷ್ಟೇ ಶಂಖ ಹೊಡೆಯಲಿ,ದೇವೆಗೌಡರು ನಾನು ಮಣ್ಣಿನ ಮಗ ಅಂತ ಎಷ್ಟೇ ಹೇಳಿಕೊಳ್ಳಲಿ ಮುಂದಿನ ಬಾರಿ ಅಧಿಕಾರಕ್ಕೆ ಬರುವದು ಕಾಂಗ್ರೆಸ್ ಪಕ್ಷ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಯಡಿಯೂರಪ್ಪ ಜೈಲಿಗೆ ಹೋಗಿ ಬಂದ ಮುಖ್ಯಮಂತ್ರಿ ಅಮೀತ ಷಾ ಕೊಲೆ ಕೇಸ್ ನಲ್ಲಿ ಸಿಲುಕಿಕೊಂಡವರು ಇವರು ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ಮಾಡುತ್ತಿದೆ ಎನ್ನುವ ಆರೋಪ ಮಾಡುತ್ತಿರುವದು ನಾಚಿಕೆಗೇಡಿನ  ಸಂಗತಿ.

ಕಾಂಗ್ರೆಸ್ ಸರ್ಕಾರ ಜನರಿಗೆ ಕೊಟ್ಟ ಭರವಸೆ ಈಡೇರಿಸಿದೆ. ಆದರೆ ಈಗ ಯಡಿಯೂರಪ್ಪ ಅವರಿಗೆ ದಲಿತರು ನೆನಪಾಗಿದ್ದಾರೆ ಬಿಜೆಪಿ ನಡಿಗೆ ದಲಿತರ ಕಡೆಗೆ ಎನ್ನುವ ಘೋಷಣೆ ಶುರು ಮಾಡಿಕೊಂಡಿದ್ದಾರೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ದಲಿತರ ಮನೆಗೆ ಏಕೆ ಹೋಗಲಿಲ್ಲ ಎಂದು ಪ್ರಶ್ನಿಸಿದ ಮುಖ್ಯಮಂತ್ರಿ ಬಿಜೆಪಿ ನಾಯಕರಿಗೆ ದಲಿತರ ಮೇಲೆ ಅಷ್ಟೊಂದು ಪ್ರೀತಿ ಇದ್ದರೆ ನಿಮ್ಮ ಹೆಣ್ಣು ಮಕ್ಕಳನ್ನು ದಲಿತರ ಮಕ್ಕಳಿಗೆ ಕೊಟ್ಟು ಮದುವೆ ಮಾಡಿಸಿ ದಲಿತರ ಹೆಣ್ಣು ಮಕ್ಕಳನ್ನು ನಿಮ್ಮ ಮಕ್ಕಳ ಜೊತೆ ಮದುವೆ ಮಾಡಿಸಿ ಎಂದು ಬಿಜೆಪಿ ನಾಯಕರಿಗೆ ಸವಾಲ್ ಹಾಕಿದರು

ಮುಖ್ಯಮಂತ್ರಿಯಾಗಿದ್ದಾಗ ಸಾಲ ಮನ್ನಾ ಮಾಡಲು ಸಾಧ್ಯವೇ ಇಲ್ಲ ನಮ್ಮ ಸರ್ಕಾರ ನೋಟ್ ಪ್ರಿಂಟ್ ಮಾಡುವ ಮಶೀನ್ ಇಟ್ಕೊಂಡಿಲ್ಲ ಎಂದು ಹೇಳಿದ್ದ ಯಡಿಯೂರಪ್ಪ ಈಗ ಸಾಲಮನ್ನಾ ಬಗ್ಗೆ ಮಾತನಾಡ್ತಾರೆ ಸಾಲ ಮನ್ನಾ ಮಾಡಲು ಸಾಧ್ಯವೇ ಇಲ್ಲ ಎಂದು ಹೇಳಿದ ಇಂತಹ ಹೇಡಿಗಳಿಗೆ ಓಟ್ ಹಾಕ್ತೀರಾ ಹಾಕಬಾರದು ಎಂದು ಸಿದ್ಧರಾಮಯ್ಯ ಯಡಿಯೂರಪ್ಪ ವಿರುದ್ಧ ಟೀಕಾ ಪ್ರಹಾರ ಮಾಡಿದರು.

ಸಮಾವೇಶದಲ್ಲಿ ಸಚಿವರಾದ ಡಿಕೇಶಿ, ಆರ್.ವಿ.ದೇಶಪಾಂಡೆ, ರಮೇಶ್ ಜಾರಕಿಹೊಳಿ, ಎಸ.ಆರ್.ಪಾಟೀಲ್, ಲಕ್ಷ್ಮಿ ಹೆಬ್ಬಾಳ್ ಕರ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: