ಕರ್ನಾಟಕಮೈಸೂರು

ಕಾವೇರಿ ಪುಷ್ಕರ : ಪ್ರವಾಸೋದ್ಯಮ ನಿಗಮದಿಂದ ಸೆ.15ರಂದು ಒಂದು ದಿನದ ಪ್ಯಾಕೇಜ್

ಬೆಂಗಳೂರು, ಸೆ. 14 : ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಸಾರಿಗೆ ವಿಭಾಗದಿಂದ ಸೆ.15 ರಿಂದ “ಕಾವೇರಿ ಪುಷ್ಕರ” ಪ್ರಯುಕ್ತ ಒಂದು ದಿನದ ಪ್ರವಾಸವನ್ನು ಏರ್ಪಡಿಸಲಾಗಿದೆ.

ಪ್ರತಿ ದಿನ ಬೆಂಗಳೂರಿನಿಂದ ಮುಂಜಾನೆ 6-30ಕ್ಕೆ ಹೊರಟು ಶ್ರೀರಂಗಪಟ್ಟಣ, ನಿಮಿಷಾಂಬ ದೇವಿ, ಕಾವೇರಿ ನದಿಯಲ್ಲಿ ಸ್ನಾನ ಮುಗಿಸಿ ರಾತ್ರಿ 8 ಗಂಟೆಗೆ ಹಿಂತಿರುಗಲಾಗುವುದು. ಈ ಪ್ರವಾಸಕ್ಕೆ ಒಬ್ಬರಿಗೆ 600 ರೂ. ದರ ನಿಗದಿಪಡಿಸಲಾಗಿದೆ.

ಅಕ್ಟೋಬರ್ ತಿಂಗಳಿನಿಂದ ಗೋವಾ ಪ್ರವಾಸ, ಉತ್ತರ ಕರ್ನಾಟಕ ಪ್ರವಾಸ ಮತ್ತು ಶ್ರೀಶೈಲ, ಮಹಾನಂದಿ, ಹೈದರಾಬಾದ್ ಪ್ರವಾಸಗಳನ್ನೂ ಸಹ ಪ್ರಾರಂಭಿಸಲಾಗುತ್ತಿದೆ. ಈ ಪ್ರವಾಸಗಳ ವಿವರಗಳಿಗೆ www.kstdc.co ವೆಬ್‍ಸೈಟ್ ಅಥವಾ  ದೂರವಾಣಿ ಸಂಖ್ಯೆ 8970650070, 080-43344334 ಗಳನ್ನು ಸಂಪರ್ಕಿಸಲು ತಿಳಿಸಿದೆ.

(ಎನ್.ಬಿ)

Leave a Reply

comments

Related Articles

error: