ಪ್ರಮುಖ ಸುದ್ದಿಮೈಸೂರು

ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ; ಪೊಲೀಸರ ಮೇಲೆ ಜವಾಬ್ದಾರಿ ಹೆಚ್ಚಿರುತ್ತದೆ : ಕಿಶೋರ್ ಚಂದ್ರ

police-web-1ಮೈಸೂರಿನ ನಜರಾಬಾದ್ ನಲ್ಲಿರುವ ಕರ್ನಾಟಕ ಪೊಲೀಸ್ ಅಕಾಡಮಿ ಕವಾಯತು ಮೈದಾನದಲ್ಲಿ ಶುಕ್ರವಾರ ಮೈಸೂರು ನಗರ ಪೊಲೀಸ್ 4ನೇ ತಂಡದ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ನಡೆಯಿತು.

ಸಿಐಡಿ ವಿಶೇಷ ಘಟಕದ ಪೊಲೀಸ್ ಮಹಾನಿರ್ದೇಶಕ ಎಚ್.ಸಿ.ಕಿಶೋರ್ ಚಂದ್ರ ಗೌರವ ವಂದನೆ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು 9 ತಿಂಗಳುಗಳ ಕಾಲ ನಡೆದ ಸುದೀರ್ಘ ತರಬೇತಿಯಲ್ಲಿ ಪ್ರಶಿಕ್ಷಣಾರ್ಥಿಗಳು ತಮ್ಮ ದೈಹಿಕ ಸಾಮರ್ಥ್ಯವನ್ನು ಅಭಿವೃದ್ಧಿ ಪಡಿಸಿಕೊಂಡು ಪ್ರದರ್ಶಿಸಿದ್ದಾರೆ. ಪೊಲೀಸ್ ಕೆಲಸಕ್ಕೆ ಸೇರಿದ ನಂತರ ಅವರ ಜವಾಬ್ದಾರಿಯು ಹೆಚ್ಚುತ್ತದೆ. ಸಮಾಜದ ಅಭಿವೃದ್ಧಿಯಲ್ಲಿ ಪೊಲೀಸರ ಕೊಡುಗೆ ಅಪಾರ ಎಂದು ತಿಳಿಸಿದರು.

ಒಮ್ಮೆ ಪೊಲೀಸ್ ವೃತ್ತಿಯಲ್ಲಿ ಸೇರಿದ ಮೇಲೆ ಆತ ವಿಶ್ರಾಂತ ಜೀವನಕ್ಕೆ ತಲುಪುವವರೆಗೂ ಸಮಾಜದಲ್ಲಿ ಪೊಲೀಸ್ ಅಂತಲೇ ಗುರುತಿಸಿಕೊಳ್ಳುತ್ತಾನೆ. ಸಮಾಜದಲ್ಲಿ ಶಾಂತಿ-ಸಾಮರಸ್ಯವನ್ನು ಕಾಪಾಡುವುದು, ಕೋಮುಸೌಹಾರ್ದತೆಯನ್ನು ಬೆಳೆಸುವುದು ಪೊಲೀಸ್ ರ ಕರ್ತವ್ಯವಾಗಿರುತ್ತದೆ. ಸರ್ಕಾರವು ಪೊಲೀಸರ ಅವಶ್ಯಕತೆಗಳನ್ನು ಪೂರೈಸುತ್ತದೆ ಎಂದರು. ಬಳಿಕ ತರಬೇತಿಯಲ್ಲಿ ವಿಜೇತ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕೆ.ಬಿ.ಸಂತೋಷ್ ಕುಮಾರ್ ತರಬೇತಿಯ ಸರ್ವೋತ್ತಮ ಪ್ರಶಸ್ತಿಯನ್ನು ಪಡೆದರು.

135 ಪ್ರಶಿಕ್ಷಣಾರ್ಥಿಗಳು ತರಬೇತಿಯಲ್ಲಿ ಪಾಲ್ಗೊಂಡಿದ್ದರು. 102 ಮಂದಿ ಕಾರವಾರ ಮತ್ತು 33ಮಂದಿ ಕೋಲಾರದಿಂದ ಪಾಲ್ಗೊಂಡಿದ್ದು, ಅವರಲ್ಲಿ 15ಮಂದಿ ಸ್ನಾತಕೋತ್ತರ ಪದವೀಧರರು, 74ಮಂದಿ ಪದವೀಧರರು ಮತ್ತು 46ಮಂದಿ ಪಿಯುಸಿ ಶಿಕ್ಷಣವನ್ನು ಪೂರೈಸಿದವರು ಭಾಗವಹಿಸಿದ್ದರು.

ನಗರ ಪೊಲೀಸ್ ಆಯುಕ್ತ ಡಾ.ಸುಬ್ರಹ್ಮಣ್ಯೇಶ್ವರರಾವ್, ದಕ್ಷಿಣ ವಲಯ ಐಜಿಪಿ ಬಿ.ಕೆ.ಸಿಂಗ್, ಕರ್ನಾಟಕ ಪೊಲೀಸ್ ಅಕಾಡಮಿಯ ನಿರ್ದೇಶಕ ವಿಫುಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: