ಮೈಸೂರು

ರಾಜ್ಯದಲ್ಲಿ ಬರ, ಬೆಳೆನಷ್ಟ: ಜನಾಂದೋಲನಗಳ ಮಹಾಮೈತ್ರಿ ಸಮಿತಿಯಿಂದ ರಾಜ್ಯಾದ್ಯಂತ ಚಳವಳಿ

ರಾಜ್ಯದಲ್ಲಿರುವ ಬರ ಮತ್ತು ರೈತರ ಸಂಕಷ್ಟ ಮತ್ತು ಕಡಿಮೆ ಮಾಡಬೇಕೆಂದು ಆಗ್ರಹಿಸಿ ರಾಜ್ಯಾದ್ಯಂತ ಚಳವಳಿ ನಡೆಸಲು ಜನಾಂದೋಲನಗಳ ಮಹಾಮೈತ್ರಿ ಸಮಿತಿ ನಿರ್ಣಯಿಸಿದೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಸಮಿತಿ, ಬೆಳಗಾವಿ ಅಧಿವೇಶನದಲ್ಲಿ ಮೊದಲ ಮೂರು ದಿನ ಕರ್ನಾಟಕದಲ್ಲಿ ಸತತ ಎರಡು ವರ್ಷಗಳಿಂದ ತಲೆದೋರಿರುವ ಬರ ಪರಿಸ್ಥಿತಿಯ ಬಗ್ಗೆ ಚರ್ಚಿಸಬೇಕು. ಬೆಳೆ ನಷ್ಟಕ್ಕೆ ವೈಜ್ಞಾನಿಕ ಪರಿಹಾರ ಮತ್ತು ರೈತರ ಸಂಪೂರ್ಣ ಸಾಲಮನ್ನಾ ಮಾಡಲು ವಿಶೇಷ ಪ್ಯಾಕೇಜ್‍ ನೀಡಬೇಕು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಶೇ.65:35 ಅನುಪಾತದಲ್ಲಿ ಆರ್ಥಿಕ ಜವಾಬ್ದಾರಿ ಹಂಚಿಕೊಳ್ಳಬೇಕೆಂದು ಒತ್ತಾಯಿಸಿತು.

ಬರ, ಪ್ರವಾಹ ಮತ್ತು ನೀರಿನ ಕೊರತೆಯಿಂದ ಉಂಟಾದ ರೈತರ ಬೆಳೆ ನಷ್ಟಕ್ಕೆ ಹಾಗೂ ಬೇಸಾಯವನ್ನೇ ಆರಂಭ ಮಾಡದೆ ಇರುವವರಿಗೆ ಪರಿಹಾರ ನೀಡಬೇಕು. ಇಲ್ಲದಿದ್ದಲ್ಲಿ, ಎಕರೆಗೆ ಕನಿಷ್ಠ 50,000 ರು. ಪರಿಹಾರಧನವನ್ನು ನೀಡಬೇಕು. ರೈತರು ಮತ್ತು ಮಹಿಳಾ ಸ್ವಸಹಾಯ ಸಂಘಗಳ ಇದುವರೆಗಿನ ಎಲ್ಲ ಸಾಲಗಳನ್ನು ಮನ್ನಾ ಮಾಡಬೇಕು ಎಂದು ಬಡಗಲಪುರ ನಾಗೇಂದ್ರ, ಪರಶುರಾಮೇಗೌಡ, ಅಭಿರುಚಿ ಗಣೇಶ್ ಆಗ್ರಹಿಸಿದ್ದಾರೆ.

ಕಳೆದ ವರ್ಷ ಬರ ಮತ್ತು ರೈತರ ಸಂಕಷ್ಟವನ್ನು ಕಡಿಮೆ ಮಾಡಲು ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡೂ ವಿಫಲವಾಗಿವೆ. ಈ ವರ್ಷ ಕೂಡ ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳೆ ನಷ್ಟ, ಬೆಲೆ ನಷ್ಟದಿಂದ ಕಂಗೆಟ್ಟಿರುವ ರೈತರ ಬಗ್ಗೆ ಸರಕಾರ ಮೊಸಳೆ ಕಣ್ಣೀರು ಮಾತ್ರ ಹಾಕುತ್ತಿದೆ. ಹಾಗಾಗಿ ಜನಾಂದೋಲನಗಳ ಮಹಾಮೈತ್ರಿಯು ರಾಜ್ಯಾದ್ಯಂತ ಈ ಕುರಿತು ಚಳವಳಿ ನಡೆಸಲು ತೀರ್ಮಾನಿಸಿದೆ.

Leave a Reply

comments

Related Articles

error: