ಕರ್ನಾಟಕ

ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಬಸ್, ಪ್ರಾಣಾಪಾಯದಿಂದ ಪಾರು

ರಾಜ್ಯ(ಬೆಂಗಳೂರು)ಸೆ.15:- ಚಾಲಕನ ನಿಯಂತ್ರಣ ತಪ್ಪಿದ ಶಾಲಾ ಬಸ್ಸೊಂದು  ಹಳ್ಳಕ್ಕೆ ಬಿದ್ದಿದೆ. ಆನೇಕಲ್ ಡೊಡ್ಡ ಕೆರೆ ಬಳಿ ಅತಿವೇಗವಾಗಿ ಚಲಿಸುತ್ತಿದ್ದ ವೇಳೆ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎನ್ನಲಾಗಿದೆ.

ನ್ಯೂ ಬಾಲ್ಡವಿನ್‌ ಇಂಟರ್ ನ್ಯಾಷನಲ್ ಸ್ಕೂಲ್ನ  ಬಸ್ ಶಾಲೆಯ ಮಕ್ಕಳನ್ನು ಡ್ರಾಪ್ ಮಾಡಿ ಬರುವ ವೇಳೆ ದುರ್ಘಟನೆ ನಡೆದಿದ್ದು, ಇಬ್ಬರು ಮಹಿಳೆ ಸೇರಿ‌ ಒಬ್ಬರಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳನ್ನು ಸ್ಥಳೀಯ ಅಸ್ಪತ್ರೆ ಗೆ ರವಾನಿಸಲಾಗಿದೆ. ಬಸ್ ಕ್ಲೀನರ್ ಹಾಗೂ ಚಾಲಕನ ಎದೆಭಾಗಕ್ಕೆ ಗಂಭೀರ ಗಾಯಗಳಾಗಿವೆ. ಲಾರಿಯನ್ನು ಹಿಂದಿಕ್ಕಲೂ ಹೋಗಿ ಈ ಅವಘಡ ಸಂಭವಿಸಿದೆ. ಚಿಕ್ಕಹೊಸಹಳ್ಳಿ ಬರುವಾಗ ಮಹಿಳೆಯರು ಶಾಲಾ ವಾಹನಕ್ಕೆ ಹತ್ತಿದ್ದರು. ಅತಿವೇಗವಾಗಿ ಚಲಿಸುತ್ತಿದ್ದ ವೇಳೆಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಆನೇಕಲ್ ಪೊಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: