ಮೈಸೂರು

ನಂಬಿಕೆ ಗೆಲುವಿನ ಮಂತ್ರ ಮತ್ತು ಯಶಸ್ಸಿನ ಗುಟ್ಟು: ವಿ. ನೀರಜ್ ಕುಮಾರ್

ನಗರದ ಎಸ್‍ಡಿಎಂಐಎಂಡಿ ಕಾಲೇಜಿನಲ್ಲಿ ಅ.28 ರಂದು ‘ಮಾರುಕಟ್ಟೆಯಲ್ಲಿ ಬದಲಾವಣೆ’ ದ್ವಿತೀಯ ವಾರ್ಷಿಕ ಸಮ್ಮೇಳನ ಹಮ್ಮಿಕೊಳ್ಳಲಾಗಿತ್ತು.

ಎಜುಟೈನ್ ಲರ್ನಿಂಗ್ ಸಿಸ್ಟಂ ಸಂಸ್ಥೆಯ ಸಿಇಓ ವಿ. ನೀರಜ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಮಾರುಕಟ್ಟೆ ಪ್ರವೃತ್ತಿಗಳ ಕುರಿತು ಮಾತನಾಡಿದರು. ಹೊಸ ಹೊಸ ಉತ್ಪನ್ನಗಳು ಮಾರುಕಟ್ಟೆಗೆ ಲಗ್ಗೆಯಿಟ್ಟು ಗ್ರಾಹಕರ ಮನಸ್ಸನ್ನು ಗೆಲ್ಲುತ್ತಿವೆ. ಉದಾಹರಣೆಗೆ ಪತಂಜಲಿ ಉತ್ಪನ್ನ. ನಂಬಿಕೆ ಗೆಲುವಿನ ಮಂತ್ರ ಮತ್ತು ಯಶಸ್ಸಿನ ಗುಟ್ಟು. ಅದು ಮೌಲ್ಯಯುತವಾದ ಕರೆನ್ಸಿ. ನಂಬಿಕೆಯಿಂದ ಗ್ರಾಹಕರನ್ನು ಗೆಲ್ಲಬೇಕು. ಮಾರುಕಟ್ಟೆಯಲ್ಲಿನ ಹೊಸ ಪ್ರವೃತ್ತಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ನಂತರ ಮಾರುಕಟ್ಟೆಯ ಇತ್ತೀಚಿನ ಪ್ರವೃತ್ತಿ ಕುರಿತಾದ ಸಿಡಿಯನ್ನು ಬಿಡುಗಡೆ ಮಾಡಲಾಯಿತು. ಸುಮಾರು 250 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಡಾ. ಎನ್.ಆರ್. ಪರಶುರಾಮನ್, ಪ್ರೊ,ಸುಗಂತ್, ಪ್ರೊ.ಜಯಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

 

Leave a Reply

comments

Related Articles

error: