ಕ್ರೀಡೆಮನರಂಜನೆ

ಜಹೀರ್ ಖಾನ್ ಮತ್ತು ಚೆಕ್ ದೇ ಬೆಡಗಿ ಸಾಗರಿಕಾ ಮದುವೆ ಡೇಟ್ ಫಿಕ್ಸ್

ನವದೆಹಲಿ, ಸೆ.15: ಇದೇ ನವೆಂಬರ್ 27ರಂದು ಕ್ರಿಕೆಟಿಗ ಜಹೀರ್ ಖಾನ್ ಮತ್ತು ಬಾಲಿವುಡ್‍ನ ಚೆಕ್ ದೇ ಬೆಡಗಿ ಸಾಗರಿಕಾ ಘಾಟ್ಜ್  ವೈವಾಹಿಕ ಜೀವನಕ್ಕೆ ಎಂಟ್ರಿಕೊಡಲು ರೆಡಿಯಾಗಿದ್ದಾರೆ.

 ಈ ಜೋಡಿ ಕಳೆದ ಮೇ ತಿಂಗಳಲ್ಲಿ ಎಂಗೆಜ್‍ಮೆಂಟ್ ಮಾಡಿಕೊಂಡಿದ್ದರು.  ಇದೇ ವರ್ಷ ನವೆಂಬರ್ 27 ರಂದು ಮದುವೆ ಡೇಟ್ ಫಿಕ್ಸ್ ಆಗಿದ್ದು, ಮದುವೆಯ ನಂತರ ಸಿನಿಮಾ ವೃತ್ತಿ ಜೀವನದಿಂದ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದೇನೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.  ಜಹೀರ್ ಖಾನ್ ನನಗೆ ಉಂಗುರವನ್ನು ಕೊಟ್ಟು ಪ್ರೀತಿಯ ವಿಚಾರವನ್ನು ಪ್ರಸ್ತಾಪಿಸಿದರು. ಒಂದು ಕ್ಷಣ ಆಶ್ಚರ್ಯಗೊಳ್ಳುವುದರ ಜೊತೆಗೆ ಖುಷಿಯಿಂದ ಕುಣಿದಾಡಿದೆ ಎಂದು ಗೆಳೆಯನ ಪ್ರೀತಿ ನಿವೇದನೆಯನ್ನು ಮಾಧ್ಯಮಗಳೊಂದಿಗೆ ಸಾಗರಿಕಾ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ನನ್ನ ಮುಂದಿನ ಜೀವನದ ಮಧುರ ಕ್ಷಣಗಳನ್ನು ಜಹೀರ್ ಜೊತೆ ಕಳೆಯಲು ನಿರ್ಧರಿಸಿದ್ದೇನೆ. ಜಹೀರ್ ನನಗೆ ಉತ್ತಮ ಸಂಗತಿಯಾಗುವುದು ನಿಶ್ಚಿತ. ಅವರ ಜೊತೆ ವೈವಾಹಿಕ ಜೀವನವನ್ನು ನಡೆಸಲು ಉತ್ಸುಕಳಾಗಿದ್ದೇನೆ. ಎರಡು ಕುಟುಂಬಗಳ ನಡುವೆಯು ಉತ್ತಮ ಬಾಂಧವ್ಯ ರೂಪುಗೊಂಡು ಮದುವೆ ಡೇಟ್ ಫಿಕ್ಸ್ ಆಗಿದೆ ಎಂದು ತಿಳಿಸಿದ್ದಾರೆ. ( ವರದಿ: ಪಿ.ಜೆ )

Leave a Reply

comments

Related Articles

error: