ಕರ್ನಾಟಕಮೈಸೂರು

ಸೆ.25-ಅ.5 : ದಸರಾ ಪ್ರಯುಕ್ತ ಕೆಎಸ್‍ಆರ್‍ಟಿಸಿಯಿಂದ ವಿವಿಧ ರೀತಿಯ ಪ್ಯಾಕೇಜ್ ಟೂರ್

ಮೈಸೂರು, ಸೆ.15 : ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಿಂದ ವಿವಿಧ ಪ್ರೇಕ್ಷಣೀಯ ಸ್ಥಳಗಳಿಗೆ ಪ್ಯಾಕೇಜ್ ಟೂರ್ (ದರ್ಶಿನಿ) ಆಯೋಜಿಸಲಾಗಿದೆ. ಸೆಪ್ಟಂಬರ್ 25 ರಿಂದ ಅಕ್ಟೋಬರ್ 5 ರವರೆಗೆ ಕಾರ್ಯಚರಣೆ ಮಾಡಲು ಕ್ರಮಕೈಗೊಳ್ಳಲಾಗಿದ್ದು, ಮುಂಗಡ ಟಿಕೇಟ್ ಮೂಲಕ ಆಸನಗಳನ್ನು ನಿಗಮದ ವೆಬ್ಸೈಟ್ www.ksrtc.in ಅಲ್ಲಿ ಕಾಯ್ದಿರಿಸಬಹುದು.

ಗಿರಿದರ್ಶಿನಿ: ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ನಂಜನಗೂಡು ಮತ್ತು ಚಾಮುಂಡಿ ಬೆಟ್ಟ (325 ಕಿಲೋಮೀಟರ್, ನಿರ್ಗಮನ ಬೆಳಗ್ಗೆ 6.30, ದೊಡ್ಡವರಿಗೆ-ರೂ 350, ಮಕ್ಕಳಿಗೆ-ರೂ 175).

ಜಲದರ್ಶಿನಿ: ಗೋಲ್ಡನ್ ಟೆಂಪಲ್, ದುಬಾರೆ ಅರಣ್ಯ, ನಿಸರ್ಗಧಾಮ, ಅಬ್ಬೆ ಜಲಪಾತ, ರಾಜಾಸೀಟ್, ಹಾರಂಗಿ ಜಲಾಶಯ ಮತ್ತು ಬೃಂದಾವನ ಉದ್ಯಾನ (350 ಕಿಲೋಮೀಟರ್, ನಿರ್ಗಮನ ಬೆಳಗ್ಗೆ 6.30, ದೊಡ್ಡವರಿಗೆ ರೂ-375, ಮಕ್ಕಳಿಗೆ ರೂ-190).

ದೇವದರ್ಶಿನಿ: ನಂಜನಗೂಡು, ತಲಕಾಡು, ಬ್ಲಫ್, ಮುಡುಕುತೊರೆ, ಸೋಮನಾಥಪುರ, ಶ್ರೀರಂಗಪಟ್ಟಣ ಮತ್ತು ಕೆ.ಆರ್.ಎಸ್ (250 ಕಿಲೋಮೀಟರ್, ನಿರ್ಗಮನ ಬೆಳಗ್ಗೆ 6.30, ದೊಡ್ಡವರಿಗೆ ರೂ-275, ಮಕ್ಕಳಿಗೆ ರೂ-140).

(ಎನ್.ಬಿ)

Leave a Reply

comments

Related Articles

error: