ಮೈಸೂರು

ಕೃಷಿ ವಿಜ್ಞಾನದ ಸಂಶೋಧನೆಗಳ ಫಲವಾಗಿ ಲೇ-ಲಡಾಕ್ ಹಸಿರಾಗಿದೆ : ಡಾ.ಮಂಜ

ಕೃಷಿಯಲ್ಲಿ ವಿನೂತನ ಸಂಶೋಧನೆಗಳನ್ನು ನಡೆಸಿ ವರ್ಷವಿಡೀ -30, -40 ಡಿಗ್ರಿ ತಾಪಮಾನವನ್ನು ಹೊಂದಿರುವ ಕೃಷಿಗೆ ಯೋಗ್ಯವಲ್ಲದ ಲೇ-ಲಡಾಕ್, ಸಿಯಾಚಿನ್ ಅಲ್ಲಿಯೇ ಇಂದು ಸಮೃದ್ಧ ಬೆಳೆ ಬೆಳೆಯಲಾಗುತ್ತಿದ್ದು ಇದಕ್ಕೆ ಆಧುನಿಕ ಕೃಷಿವಿಜ್ಞಾನ ಕ್ಷೇತ್ರದ ಸಂಶೋಧನೆಯ ಫಲವೆಂದು ಹಿರಿಯ ಕೃಷಿ ವಿಜ್ಞಾನಿ ಡಾ.ಮಂಜ ತಿಳಿಸಿದರು.

ಅವರು ಮೈಸೂರು ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಸೊಸೈಟಿಯೂ ಲಿನ್ನೆಯಸ್ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ “ತೀಕ್ಷ್ಣ ವಾತಾವರಣದಲ್ಲಿ ಕೃಷಿ ಪದ್ಧತಿಗಳು ಮತ್ತು ಸಂಶೋಧನಾ ಅವಶ್ಯಕತೆಗಳು” ವಿಚಾರ ಸಂಕಿರಣದಲ್ಲಿ ಮಾತನಾಡಿ, ಹಸಿರನ್ನು ಬೆಳೆಯದಂತಹ ಲೇ-ಲಡಾಕ್ ವಾತಾವರಣವನ್ನು ತಂತ್ರಜ್ಞಾನದಿಂದ ಕೃಷಿಗೆ ಸೂಕ್ತವಾಗಿ ಪರಿವರ್ತಿಸಿ ಸಮೃದ್ಧ ತರಕಾರಿ ಬೆಳೆಯಲಾಗುತ್ತಿದ್ದು ಶೇ.70ರಷ್ಟು ತಾಜಾ ತರಕಾರಿಯನ್ನು ಸೈನ್ಯಕ್ಕೆ ಪೂರೈಸಲಾಗುತ್ತಿದೆ. ಐಸಿಆರ್-ಡಿಆರ್‍ಡಿಯೂ ಆ ಪ್ರದೇಶದ ಕಷಿ ಚಟುವಟಿಕೆಗೆ ಹಾಗೂ ಸಂಶೋಧನೆಗಳಿಗೆ ಕೈಜೋಡಿಸಿದ್ದು ಬೀಜಗಳ ಸಂರಕ್ಷಣೆಗೆ ಸೂಕ್ತ ವಾತಾವರಣ ಕಲ್ಪಿಸಲಾಗುತ್ತಿದೆ. ರೈತರು ಕೃಷಿ ವಿಜ್ಞಾನಿಗಳೊಂದಿಗೆ ಸಮಾಲೋಚನೆ ನಡೆಸುವುದರಿಂದ ಕ್ಷೇತ್ರದಲ್ಲಿ ಆಗಿರುವ ನೂತನ ತಂತ್ರಜ್ಞಾನ ಪದ್ಧತಿ ತಿಳುವಳಿಕೆ, ಜ್ಞಾನ ಲಭ್ಯವಾಗುವುದು. ಸೌರಶಕ್ತಿಯನ್ನು ಬಳಸುವುದರಿಂದ ವಿದ್ಯುತ್ ಕ್ಷಾಮವನ್ನು ತಡೆಗಟ್ಟಬಹುದು. ಈ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಬೇಕು ಎಂದು ಆಶಿಸಿ, ಮಿತ ನೀರಿನಲ್ಲಿ ಕೃಷಿ, ಭೂಮಿ ಫಲವತ್ತತೆ, ಜಾಗತಿಕ ತಾಪಮಾನದಿಂದ ಸಂಭವಿಸಿರುವ ದುಷ್ಪರಿಣಾಮವನ್ನು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿದರು.

ವಿಚಾರ ಸಂಕಿರಣದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಸಸ್ಯಶಾಸ್ತ್ರ ಸೊಸೈಟಿಯ ಅಧ್ಯಕ್ಷೆ ಡಾ.ಶೋಭಾ ಜಗನಾಥ್ ಅಧ್ಯಕ್ಷತೆ ವಹಿಸಿದ್ದರು.

Leave a Reply

comments

Related Articles

error: