ಮೈಸೂರು

ಲಯನ್ಸ್ ಕ್ಲಬ್ ವತಿಯಿಂದ ಇಂಜಿನಿಯರುಗಳ ದಿನಾಚರಣೆ 

ಮೈಸೂರು, ಸೆ.15: ಲಯನ್ಸ್ ಕ್ಲಬ್ ಆಫ್ ಮೈಸೂರು ಕ್ಲಾಸಿಕ್, ವಲಯ-೧, ಪ್ರಾಂತ್ಯ-೧ ಇವರ ವತಿಯಿಂದ ವಿಜಯನಗರ ೨ನೇ ಹಂತದಲ್ಲಿರುವ ಲಯನ್ಸ್ ಟ್ರಸ್ಟ್ ಆಫ್ ಮೈಸೂರು ಸಮುದಾಯ ಭವನದಲ್ಲಿ ಇಂಜಿನಿಯರುಗಳ ದಿನಾಚರಣೆಯನ್ನು ಆಯೋಜಿಸಲಾಗಿತ್ತು.

ಈ ವೇಳೆ ಲಯನ್ಸ್ ಸಂಸ್ಥೆ ಅಧ್ಯಕ್ಷ ಹೆಚ್.ಎನ್.ದೇವಪ್ರಸಾದ್ ಮಾತನಾಡಿ, ದೇಶಕ್ಕೆ ಇಂಜಿನಿಯರ್ ಗಳ ಕೊಡುಗೆ ಅಪಾರ. ದೇಶದ ಅಭಿವೃದ್ಧಿಯಲ್ಲಿ ಹಾಗೂ ಆರ್ಥಿಕ ಪ್ರಗತಿಯನ್ನು ಇಂಜಿನಿಯರ್ ಗಳ ಶ್ರಮ ಹೆಚ್ಚರುತ್ತದೆ. ಸರ್ ಎಂ.ವಿಶ್ವೇಶ್ವರಯ್ಯನವರು ತಮ್ಮ ಅಪಾರ ಬುದ್ಧಿಶಕ್ತಿಯಿಂದ ಕೆಆರ್ ಎಸ್ ಅಣೆಕಟ್ಟೆ ನಿರ್ಮಿಸಿ ಲಕ್ಷಾಂತರ ಜನರಿಗೆ ನೆರವಾಗಿದ್ದಾರೆ. ಅವರು ಇತ್ತೀಚಿನ ಇಂನಿಯರ್ ಗಳಿಗೆ ಮಾದರಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರದ ಚಾರ್ಟೆರ್ಡ್ ಇಂಜಿನಿಯರ್ ಆರ್.ನಾಗರಾಜ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಲಯನ್ ಧರ್ಮರಾಜ್, ಖಜಾಂಚಿ ರವೀಂದ್ರನಾಥ್, ವಲಯ ಅಧ್ಯಕ್ಷ ಎನ್.ಎಸ್.ವಿಶ್ವನಾಥ್, ಲಯನ್ಸ್ ಸಂಸ್ಥೆಯ ಜಿಲ್ಲೆ ೩೧೭-ಎ ೨೦೧೭-೧೮ರ ೨ನೇ ಉಪ ರಾಜ್ಯಪಾಲ ಲಯನ್ ನಾಗರಾಜ್ ವಿ.ಬೈರಿ, ಲಯನ್ ಎಸ್.ರಾಮಚಂದ್ರ, ವಕೀಲ ಹಾಗೂ ಕರ್ನಾಟಕ ನೋಟರಿ ಸಂಘದ ಅಧ್ಯಕ್ಷ ಪಿ.ರಮೇಶ್‌ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: