ಪ್ರಮುಖ ಸುದ್ದಿಮೈಸೂರು

ನಾಳೆಯಿಂದ ಆರಂಭವಾಗಲಿದೆ ಹೆಲಿರೈಡ್ಸ್ : ಪ್ರವಾಸಿಗರು ಅವಕಾಶ ಸದುಪಯೋಗಪಡಿಸಿಕೊಳ್ಳಿ : ಡಿ.ರಂದೀಪ್

ಮೈಸೂರು,ಸೆ.15:-ಮೈಸೂರಿನಲ್ಲಿ ದಸರಾ ಉತ್ಸವವು ಅತಿ ದೊಡ್ಡ ಸಾರ್ವಜನಿಕ ಸಮಾರಂಭವಾಗಿದ್ದು ಪ್ರವಾಸಿಗರನ್ನು ಕೈಬೀಸಿ ಕರೆಯಲಿದೆ. ಪ್ರವಾಸಿಗರು ಮೈಸೂರಿನ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಟ್ರಿಣ್ ಟ್ರಿಣ್ ಸೇವೆಗೆ ಜಿಲ್ಲಾಡಳಿತ ಮುಂದಾಗಿದ್ದು ಕೆಲವು ಕ್ರಮಗಳನ್ನು ಕೈಗೊಂಡಿದೆ. ಪ್ರವಾಸಿಗರು ಇವುಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು  1. ಬಲರಾಮ ಗೇಟ್,  2. ಅಂಬಾವಿಲಾಸ್ ಗೇಟ್,3. ವರಾಹ ಗೇಟ್ ಬಳಿ ನಿಲ್ದಾಣ ತೆರೆಯಲಾಗುವುದು. ನಿಲ್ದಾಣದಲ್ಲಿ 20-25ಸೈಕಲ್ ಗಳಿರಲಿದ್ದು, ಈ ಸೇವೆಯನ್ನು ಪಡೆಯಲು  ಬಯಸುವವರು ಮಾನ್ಯವಾದ ಗುರುತಿನ ಪುರಾವೆಗಳನ್ನು ಒದಗಿಸಿ ದೈನಂದಿನ ಯೋಜನೆಯನ್ನು ಪಡೆಯಬಹುದಾಗಿದೆ. ದಸರಾದಲ್ಲಿ ಮೂರು ರೀತಿಯ ಸೇವೆಗಳಿರುತ್ತವೆ. ಒಂದು ದಿನದ ಸೇವೆ- 50 ರೂ, 3 ದಿನದ ಸೇವೆ – 150ರೂ, ಒಂದು ವಾರದ ಸೇವೆ 150 ರೂ ಇರಲಿದೆ ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ www.mytrintrin.com , ಮೈ ಟ್ರಿಣ್ ಟ್ರಿಣ್ ಆಪ್ ಟ್ರಿಣ್ ಟ್ರಿಣ್ ರಜಿಸ್ಟ್ರೇಶನ್ ಸೆಂಟರ್ ಗಳನ್ನು ಸಂಪರ್ಕಿಸಬಹುದು. ಸಹಾಯವಾಣಿಗಾಗಿ 0821-2333000,0821-6500301ನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ದಸರಾ ಮಹೋತ್ಸವ ಅಂಗವಾಗಿ ವಿಶೇಷ ಪ್ರವಾಸಿ ಚಟುವಟಿಕೆಯಾಗಿ ಹೆಲಿರೈಡ್ಸ್ ನ್ನು ಮೈಸೂರು ಜಿಲ್ಲಾಡಳಿತ, ಪವನ್ ಹನ್ಸ ಲಿಮಿಟೆಡ್ ಹಾಗೂ ಚಿಪ್ಸನ್ ಏವಿಯೇಷನ್ ಲಿಮಿಟೆಡ್, ನವದೆಹಲಿ ಇವರ ಸಹಯೋಗದೊಂದಿಗೆ ಸೆ.16ರಿಂದ ಅ.5ರವರೆಗೆ ಲಲಿತ್ ಮಹಲ್ ಹೆಲಿಪ್ಯಾಡ್ ನಲ್ಲಿ ಆಯೋಜಿಸಲಾಗುತ್ತಿದೆ. ಒಂದು ರೈಡ್ ನಲ್ಲಿ 6ಜನರನ್ನು ಕರೆದೊಯ್ಯಬಹುದಾಗಿದೆ. 10ನಿಮಿಷಗಳ ಮೈಸೂರು ನಗರದ ವಿಹಂಗಮ ನೋಟದೊಂದಿಗೆ ಏರಿಯಲ್ ರೈಡ್ ಮಾಡಿಸಲಾಗುವುದು. ಲಲಿತ್ ಮಹಲ್ ಹೆಲಿಪ್ಯಾಡ್ ನಿಂದ ಬೆಳಿಗ್ಗೆ 9ಗಂಟೆಯಿಂದ ಸಂಜೆ 5ರವರೆಗೆ ಒಬ್ಬರಿಗೆ ರೂ.2300, ವಿಶೇಷಚೇತನರಿಗೆ ಹಾಗೂ 6ವರ್ಷದೊಳಗಿನ ಮಕ್ಕಳಿಗೆ 2200ರೂ ನಿಗದಿಪಡಿಸಲಾಗಿದೆ. ಟಿಕೇಟ್ ಗಳು ಪವನ್ ಹನ್ಸ್ ಲಿಮಿಟೆಡ್, ಲಲಿತ್ ಮಹಲ್ ಹೆಲಿಪ್ಯಾಡ್ ಬುಕ್ಕಿಂಗ್ ಕೌಂಟರ್, ಆನ್ ಲೈನ್ ಬುಕ್ಕಿಂಗ್ ಗಾಗಿ –www.pawanhans.co.in, ಮೊ.ಸಂ.8828122245, 8828122260, ಹಾಗೂ ಚಿಪ್ಸನ್ ಏವಿಯೇಷನ್ ಲಿಮಿಟೆಡ್ ಲಲಿತ ಮಹಲ್ ಹೆಲಿಪ್ಯಾಡ್ ಬುಕ್ಕಿಂಗ್ ಕೌಂಟರ್, ಆನ್ ಲೈನ್ ಬುಕಿಂಗ್ ಗಾಗಿ www.bookmyshow.com ಅಥವಾ ಮೊ.ಸಂ. 8375914948 ಸಂಪರ್ಕಿಸಬಹುದು. ದಸರಾ ವೆಬ್ ಸೈಟ್ ನಿಂದ ಲಿಂಕ್ ನೀಡಲಾಗುತ್ತಿದೆ. www.mysoredasara.gov.in ನೋಡಬಹುದು ಎಂದು ತಿಳಿಸಿದರು.

ಈ ಸಂದರ್ಭ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: