ಕರ್ನಾಟಕಪ್ರಮುಖ ಸುದ್ದಿ

ಋಣ ಮುಕ್ತ ರೈತ ಸಮಾಜದ ನಿಮಾಣ ಮತ್ತು ಸ್ವಾಮೀನಾಥನ್ ವರದಿಯ ಅನುಷ್ಠಾನಕ್ಕೆ ಒತ್ತಾಯಿಸಿ ಸೆ.22ರಂದು ರೈತರ ಬೃಹತ್ ಸಮಾವೇಶ

ರಾಜ್ಯ(ಮಂಡ್ಯ).ಸೆ.15:- ಋಣ ಮುಕ್ತ ರೈತ ಸಮಾಜದ ನಿಮಾಣ ಮತ್ತು ಸ್ವಾಮೀನಾಥನ್ ವರದಿಯ ಅನುಷ್ಠಾನಕ್ಕೆ ಒತ್ತಾಯಿಸಿ ಪಾಂಡವಪುರ ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಸೆ.22ರಂದು ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ದಕ್ಷಿಣ ಭಾರತ ರೈತರ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ಆರ್.ಜಯರಾಂ ತಿಳಿಸಿದರು.

ರೈತರ ಸಮಾವೇಶದ ಹಿನ್ನೆಲೆಯಲ್ಲಿ ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ನಡೆದ ತಾಲೂಕು ರೈತಸಂಘದ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ದೇಶದ ರೈತರ ಉಳಿವಿನ ಹೋರಾಟಕ್ಕೆ ಹೆಗಲು ನೀಡುವಂತೆ ಜಾಥಾ ವಿವಿಧ ರಾಜ್ಯಗಳಲ್ಲಿ ಭುಗಿಲೆದ್ದ ಯುವ ರೈತರ ಹೋರಾಟ ಹಾಗೂ ಮಧ್ಯಪ್ರದೇಶದ ಮಂಡಸೂರಿನಲ್ಲಿ ನಡೆದ ಅಮಾನೀಯ ಗೋಲೀಬಾರ್ ಮತ್ತು 6 ಜನ ಯುವ ರೈತರ ಹತ್ಯೆಯ ಅನಂತರ ಜೂನ್ 2017ರಲ್ಲಿ ಸುಮಾರು 170 ರೈತ ಸಂಘಟನೆಗಳು ಜೊತೆಗೂಡಿ ಅಖಿಲ ಭಾರತ ರೈತ ಹೋರಾಟ ಸಮಿತಿಯನ್ನು ರಚಿಸಿಕೊಂಡಿದ್ದು ಆಧುನಿಕ ಗುಲಾಮಗಿರಿಯಿಂದ ರೈತ ಸಮುದಾಯವನ್ನು ಮುಕ್ತಿಗೊಳಿಸಲು ನವೆಂಬರ್ 20ರಂದು ದೆಹಲಿಯಲ್ಲಿ ರೈತ ಸಂಸತ್ ನಡೆಸುವ ಮೂಲಕ ದೇಶದಾದ್ಯಂತ ರೈತ ಹೋರಾಟಕ್ಕೆ ಚಾಲನೆ ನೀಡಲಿವೆ. ಈ ಹಿನ್ನೆಲೆಯಲ್ಲಿ ಸೆ.22ರಂದು ಪಾಂಡವಪುರದಲ್ಲಿ ರೈತ ಜಾಥಾ ಸಮಾವೇಶವನ್ನು ಆಯೋಜಿಸಲಾಗಿದೆ ಎಂದ ಜಯರಾಂ ಸಾಲವಿಲ್ಲದ ರೈತ ಮತ್ತು ಸಾಲವಿಲ್ಲದ ಗ್ರಾಮ ಎನ್ನುವುದು ದೇಶದ ಅಭಿವೃದ್ದಿಯ ಮುಖ್ಯ ನೀತಿಯಾಗಬೇಕೆಂಬುದು ನಮ್ಮ ಹೋರಾಟದ ಮುಖ್ಯ ಆಶಯವೆಂದರು.

ರೈತ ಸಂಘದ ಮೈಸೂರು ವಿಭಾಗೀಯ ಕಾರ್ಯದರ್ಶಿ ಕೊಣಸಾಲೆ ನರಸರಾಜು, ಜಿಲ್ಲಾ ರೈತಸಂಘದ ಅಧ್ಯಕ್ಷ ಶಂಭೂನಹಳ್ಳಿ ಸುರೇಶ್, ಮಹಿಳಾ ಘಟಕದ ಅಧ್ಯಕ್ಷೆ ಲತಾಶಂಕರ್, ಜಿಲ್ಲಾ ರೈತ ಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ, ಜಿಲ್ಲಾ ಕಾರ್ಯದರ್ಶಿ ಲಿಂಗಪ್ಪಾಜಿ, ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: