ಪ್ರಮುಖ ಸುದ್ದಿಮೈಸೂರು

ವಿಧಾನಸಭಾ ಚುನಾವಣೆ: ಬಿಜೆಪಿಗೆ ಜಿಲ್ಲಾ, ಕ್ಷೇತ್ರವಾರು ಉಸ್ತುವಾರಿಗಳ ನೇಮಕ

ಮೈಸೂರು,ಸೆ.15-2018 ನೇ ವಿಧಾನಸಭಾ ಚುನಾವಣೆಗೆ ಸದ್ದಿಲ್ಲದೆ ಬಿಜೆಪಿ ಪಾಳಯ ಸಿದ್ಧವಾಗಿದ್ದು, ರಾಜ್ಯ ಬಿಜೆಪಿಗೆ ಜಿಲ್ಲಾ, ಕ್ಷೇತ್ರವಾರು ಉಸ್ತುವಾರಿಗಳ ನೇಮಕವಾಗಿದೆ. ಮುಂಬರುವ ಚುನಾವಣೆಗೆ ಈಗಿನಿಂದಲೇ ಬಿಜೆಪಿ ಕಸರತ್ತು ಆರಂಭಿಸಿದೆ.

ವರುಣ ಕ್ಷೇತ್ರದ ಚುನಾವಣಾ ಉಸ್ತುವಾರಿಯಾಗಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಚಾಮುಂಡೇಶ್ವರಿ ಕ್ಷೇತ್ರಕ್ಕೆ ಆರ್.ಅಶೋಕ್, ನಂಜನಗೂಡಿಗೆ ವಿ.ಶ್ರೀನಿವಾಸ ಪ್ರಸಾದ್, ಕೊಳ್ಳೇಗಾಲ ಉಸ್ತುವಾರಿ ಪ್ರತಾಪ್ ಸಿಂಹ, ಕೃಷ್ಣರಾಜ ಕ್ಷೇತ್ರಕ್ಕೆ ಶಾಸಕ ರವಿಸುಬ್ರಹ್ಮಣ್ಯ, ಚಾಮರಾಜ ಕ್ಷೇತ್ರಕ್ಕೆ ಎಂ.ಸತೀಶ್ ರೆಡ್ಡಿ, ನರಸಿಂಹರಾಜ ಕ್ಷೇತ್ರಕ್ಕೆ ಹೇಮಂತ ಕುಮಾರ್, ಕೆ.ಆರ್.ನಗರಕ್ಕೆ ಡಾ.ತೇಜಶ್ವಿನಿ ರಮೇಶ್, ಮಂಗಳೂರು ಮತ್ತು ಮಂಗಳೂರು ಉತ್ತರಕ್ಕೆ ಸಂಸದ ಹಾಗೂ ಕೇಂದ್ರ ಸಚಿವ ಎಚ್.ಎನ್.ಅಂನತಕುಮಾರ್, ಬಂಟ್ವಾಳಕ್ಕೆ ಶಾಸಕ ಸಿ.ಟಿ.ರವಿ, ಶಿರಹಟ್ಟಿಗೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ತರಿಕೇರೆಗೆ ಸಂಸದ ಬಿ.ಎಸ್.ಯಡಿಯೂರಪ್ಪ, ಮುಧೋಳಗೆ ಶಾಸಕ ಗೋವಿಂದ ಕಾರಜೋಳ, ಶಿವಾಜಿನಗರಕ್ಕೆ ಶೋಭಾ ಕರಂದ್ಲಾಜೆ, ದೊಡ್ಡಬಳ್ಳಾಪುರಕ್ಕೆ ಅರವಿಂದ ಲಿಂಬಾವಳಿ ನೇಮಕಗೊಂಡಿದ್ದಾರೆ.

ಮೈಸೂರು ನಗರಕ್ಕೆ ಮೈ.ವಿ.ರವಿಶಂಕರ್, ಮೈಸೂರು ಗ್ರಾಮಾಂತರಕ್ಕೆ ರಾಮಕೃಷ್ಣ, ಚಾಮರಾಜನಗರಕ್ಕೆ ನಾರಾಯಣ ಪ್ರಸಾದ್, ಮಂಡ್ಯಕ್ಕೆ ಸತೀಶ್ ಅವರನ್ನು ನೇಮಕ ಮಾಡಲಾಗಿದೆ. ಚುನಾವಣಾ ಪೂರ್ವದಲ್ಲಿಯೇ 224 ಕ್ಷೇತ್ರಗಳಿಗೆ ಚುನಾವಣಾ ಉಸ್ತುವಾರಿಗಳ ನೇಮಕ ಮಾಡಿದ್ದು, ಆಯಾ ಕ್ಷೇತ್ರಗಳಲ್ಲಿ ಪಕ್ಷದ ಗೆಲುವಿಗೆ ರಣತಂತ್ರ ರೂಪಿಸಲಾಗಿದೆ. (ವರದಿ-ಎಸ್.ಎನ್, ಎಂ.ಎನ್)

Leave a Reply

comments

Related Articles

error: