ಕರ್ನಾಟಕ

ಮಡಿಕೇರಿ ದಸರಾ : ಸೆ.24 ರಂದು ಮಹಿಳಾ ದಸರಾ ಸಂಭ್ರಮ

ಮಡಿಕೇರಿ, ಸೆ.15:  ಮಡಿಕೇರಿ ದಸರಾ ಜನೋತ್ಸವ ಸಂದರ್ಭ ದಸರಾ ಸಾಂಸ್ಕೃತಿಕ ವತಿಯಿಂದ 5 ನೇ ವರ್ಷದ ಮಹಿಳಾ ದಸರಾವನ್ನು ಈ ವರ್ಷ ಸೆ.24 ರಂದು ಭಾನುವಾರ ಮಡಿಕೇರಿ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದೆ.

ಮಹಿಳಾ ದಸರಾ ಸಂದರ್ಭ ಸೆ.24 ರಂದು  ಭಾನುವಾರ ಬೆಳಗ್ಗೆ  9.30  ಗಂಟೆಯಿಂದಲೇ ಜಿಲ್ಲೆಯ ಮಹಿಳೆಯರಿಗಾಗಿ ವೈವಿಧ್ಯಮಯ ಸ್ಪರ್ಧೆ ಆಯೋಜಿಸಲಾಗಿದೆ ಎಂದು ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ತಿಳಿಸಿದ್ದಾರೆ. ಮಡಿಕೇರಿ ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಪೌರಾಯುಕ್ತೆ ಬಿ.ಶುಭಾ,  ದಸರಾ ಸಾಂಸ್ಕೃತಿಕ ಸಮಿತಿ ಸದಸ್ಯೆ  ಸವಿತಾ ರಾಕೇಶ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವ?ದ್ದಿ ಇಲಾಖಾಧಿಕಾರಿ ಮಮ್ತಾಜ್ , ಪ್ರಭಾ ಈ ಬಾರಿಯ  ಮಹಿಳಾ ದಸರಾ ಉಸ್ತುವಾರಿ ಹೊಂದಿದ್ದು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಮಹಿಳಾ ದಸರಾ ಯಶಸ್ವಿಗೊಳಿಸುವ ವಿಶ್ವಾಸವನ್ನೂ ಅನಿಲ್ ತಿಳಿಸಿದ್ದಾರೆ. ಮಹಿಳೆಯರಿಗಾಗಿ ಭಾರತೀಯ ಸಾಂಪ್ರದಾಯಿಕ ಉಡುಗೆ ಸ್ಪರ್ಧೆ, ಕಣ್ಣಿಗೆ  ಬಟ್ಟೆ ಕಟ್ಟಿ  ಮಡಕೆ ಒಡೆಯುವ ಸ್ಪರ್ಧೆ,  ಕಣ್ಣಿಗೆ ಬಟ್ಟೆ ಕಟ್ಟಿ ಮುಖಕ್ಕೆ ಅಲಂಕಾರ ಮಾಡುವ ಸ್ಪರ್ಧೆ, ಭಾರತೀಯ ಶೈಲಿ ಮತ್ತು ಅರೇಬಿಕ್ ಶೈಲಿಯಲ್ಲಿ ಮೆಹಂದಿ ಹಾಕುವ ಸ್ಪರ್ಧೆ, ಛದ್ಮವೇಶ  ಸ್ಪರ್ಧೆ,  ಹೂವಿನ ಹಾರ ಮಾಡುವ ಸ್ಪರ್ಧೆ,  ಮಹಿಳೆಯರಿಗಾಗಿಯೇ ಲಗೋರಿ ಆಟದ ಸ್ಪರ್ಧೆ, ಮಹಿಳೆಯರಿಗೆ ಗೋಲಿ ಆಟದಂಥ ವಿಶಿಷ್ಟ ಸ್ಪರ್ಧೆಗಳನ್ನೂ ಈ ವರ್ಷ  ಆಯೋಜಿಸಲಾಗಿದೆ.

ಅಂತೆಯೇ ಮಹಿಳಾ ದಸರಾ ಸಂದರ್ಭ ಎರಡನೇ ವರ್ಷದಲ್ಲಿ ಸಿರಿಧಾನ್ಯ ಮೇಳವನ್ನೂ ಆಯೋಜಿಸಲಾಗಿದ್ದು, ಗ್ರಾಮೀಣ ಖಾದ್ಯಗಳ ವೈವಿಧ್ಯ ಬಿಂಬಿಸುವ ಪ್ರದರ್ಶನ ಮತ್ತು ಸ್ಪರ್ಧೆಯನ್ನು ಸಿರಿಧಾನ್ಯ ಮೇಳದಲ್ಲಿ  ಏರ್ಪಡಿಸಲಾಗಿದೆ.  ಕೊಡಗು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಹಕಾರದೊಂದಿಗೆ  ಜಿಲ್ಲೆಯ ಮಹಿಳಾ ಸಂಘಗಳು  ಉತ್ಪಾದಿಸಿದ ವಿವಿಧ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಕೂಡ ಮಹಿಳಾ ದಸರಾದ ವಿಶೇಷವಾಗಿದೆ. ಈ ಬಾರಿಯೂ ಮಹಿಳಾ ದಸರಾವನ್ನು ಮಡಿಕೇರಿ ನಗರಸಭೆಯ ಮಹಿಳಾ ಸದಸ್ಯೆಯರು ಹಾಗೂ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿದೆ ಎಂದೂ ಅನಿಲ್ ತಿಳಿಸಿದ್ದಾರೆ.

ಜಿಲ್ಲೆಯ ಮಹಿಳೆಯರು ವೈವಿಧ್ಯಮಯ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಸೆ. 22 ರೊಳಗಾಗಿ ಹೆಸರನ್ನು ನೋಂದಾಯಿಸುವಂತೆ ಸೂಚಿಸಲಾಗಿದೆ. ಹೆಸರು ನೋಂದಾಯಿಸಲು ಸಂಪರ್ಕ ಸಂಖ್ಯೆ – ಛದ್ಮವೇಶ ಸ್ಪರ್ಧೆ ( ಬಂಗೇರಾ –  9448504831, ವೀಣಾಕ್ಷಿ – 8762303208, ಭಾರತೀಯ ಸಾಂಪ್ರದಾಯಿಕ  ಉಡುಗೆ ಸ್ಪರ್ಧೆ – ಸಂಗೀತ ಪ್ರಸನ್ನ – 9591173292. ಅನಿತಾ ಪೂವಯ್ಯ – 9449982925,  ಗೋಲಿ ಆಟ ಮತ್ತು ಲಗೋರಿ ಸ್ಪರ್ಧೆ- ಸವಿತಾ ರಾಕೇಶ್  –  7026360963, ಕಣ್ಣಿಗೆ ಬಟ್ಟೆ ಕಟ್ಟಿ ಮುಖಕ್ಕೆ ಅಲಂಕಾರ ಮಾಡುವ ಸ್ಪರ್ಧೆ – ಎ.ಕೆ.  ಲಕ್ಷ್ಮಿ – 9483785466, ಐ.ಜಿ.ಶಿವಕುಮಾರಿ – 9972069602,  ಮೆಹಂದಿ ಹಾಕುವ ಸ್ಪರ್ಧೆ – ನೀಮಾ ಅರ್ಷದ್ – 9902612796. ಕಣ್ಣಿಗೆ ಬಟ್ಟೆ ಕಟ್ಟಿ ಮಡಕೆ ಒಡೆಯುವ ಸ್ಪರ್ಧೆ – ಲೀಲಾ ಶೇಷಮ್ಮ –  9972167579, ಜುಲೆಕಾಬಿ – 9972957351. ಹೂವಿನ ಹಾರ ಮಾಡುವ ಸ್ಪರ್ಧೆ – ತಜಸುಂ  – 7204289191.  ಮಹಿಳಾ ಸಂಘಗಳ ವೈವಿಧ್ಯಮಯ ಉತ್ಪನ್ನಗಳ ಪ್ರದರ್ಶನಕ್ಕಾಗಿ ಪ್ರಭಾ – 9686280372, ಸಿರಿಧಾನ್ಯ ಮೇಳ – ಸರು ಸತೀಶ್ -9845426744, ಕೆ.ಜಯಲಕ್ಷಿ 9663119670 ಮತ್ತು  ದಮಯಂತಿ – 9611091276 ಇವರನ್ನು ಸಂಪರ್ಕಿಸಬಹುದಾಗಿದೆ. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: