ಸುದ್ದಿ ಸಂಕ್ಷಿಪ್ತ

ದಸರಾ: ವಿದ್ಯುತ್ ದೀಪಾಲಂಕಾರಗೊಳಿಸಲು ಮನವಿ

ಮಡಿಕೇರಿ ಸೆ.15:-ಕೊಡಗಿನ ಐತಿಹಾಸಿಕ ಪ್ರಸಿದ್ಧ ಮಡಿಕೇರಿ ದಸರಾ ಜನೋತ್ಸವ ಕಾರ್ಯಕ್ರಮವು ಸೆಪ್ಟೆಂಬರ್, 21 ರಿಂದ 30 ರವರೆಗೆ ನಡೆಯಲಿದ್ದು, ದಸರಾ ಸಮಿತಿ ವತಿಯಿಂದ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿರುವುದರಿಂದ ಆ ಪ್ರಯುಕ್ತ ಎಲ್ಲಾ ದೇವಾಲಯಗಳು, ಗದ್ದಿಗೆ, ಖಾಸಗಿ ಕಟ್ಟಡಗಳು, ವಾಣಿಜ್ಯ ಕಟ್ಟಡಗಳು, ಬ್ಯಾಂಕ್‍ಗಳು, ಹೋಟೆಲ್‍ಗಳು ಹಾಗೂ ಹೋಂ ಸ್ಟೇಗಳ ಮಾಲೀಕರುಗಳು ಅವರವರಿಗೆ ಸಂಬಂಧಪಟ್ಟ ಕಟ್ಟಡಗಳಿಗೆ ವಿಶೇಷವಾಗಿ ವಿದ್ಯುತ್ ದೀಪಾಲಂಕಾರಗೊಳಿಸಿ ಈ ನಾಡ ಹಬ್ಬಕ್ಕೆ ವಿಶೇಷ ಮೆರುಗು ನೀಡುವಂತೆ ಮಡಿಕೇರಿ
ನಗರ ದಸರಾ ಸಮಿತಿ ಹಾಗೂ ನಗರಸಭೆ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ ಅವರು ತಿಳಿಸಿದ್ದಾರೆ. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: