ಸುದ್ದಿ ಸಂಕ್ಷಿಪ್ತ
ಸೆ.16 ರಂದು ಜಿ.ಪಂ.ಕೆ.ಡಿ.ಪಿ ಸಭೆ
ಮಡಿಕೇರಿ, ಸೆ.15: 2017-18ನೇ ಸಾಲಿನ ಆಗಸ್ಟ್ ಅಂತ್ಯದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ 120 ಅಂಶ ಕಾರ್ಯಕ್ರಮ ಸೇರಿದಂತೆ ಜಿಲ್ಲಾ ಮಟ್ಟದ ಮಾಸಿಕ ಸಭೆಯು ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್.ಸೀತಾರಾಂ ಅವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್, 16
ರಂದು ಬೆಳಗ್ಗೆ 11 ಗಂಟೆಗೆ ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ನಡೆಯಲಿದೆ ಎಂದು ಜಿ.ಪಂ.ಸಿಇಒ ಅವರು ತಿಳಿಸಿದ್ದಾರೆ. (ಕೆಸಿಐ, ಎಲ್.ಜಿ)