ಮೈಸೂರು

ದಸರಾ ವೇಳೆ ಟ್ರಿಣ್-ಟ್ರಿಣ್ ಸೈಕಲ್ ಬಳಸಲು ದಿನದ, ವಾರದ ಪಾಸುಗಳು ಲಭ್ಯ

ಮೈಸೂರು, ಸೆ.16 : ದಸರೆ ವೇಳೆ ಮೈಸೂರಿನ ಕೆಲವು ಪ್ರಮುಖ ಪ್ರವಾಸಿತಾಣಗಳ ಬಳಿ ಸಂಚಾರ ದಟ್ಟಣೆ ತಪ್ಪಿಸಲು ಮತ್ತು ಪ್ರವಾಸಿ ಸ್ನೇಹಿ ವಾತಾವರಣ ನಿರ್ಮಿಸಲು ವಾಹನ ಸಂಚಾರ ಮುಕ್ತ ವಲಯ ಮಾಡಲು ಪ್ರಯತ್ನ ನಡೆಸಲಾಗಿದೆ. ಇದರ ಭಾಗವಾಗಿ ಟ್ರಣ್-ಟ್ರಿಣ್ ಪ್ರವಾಸಿಗರಿಗೆ ನೆರವಾಗಲಿದೆ. ಸರಳ ಹಾಗೂ ಅಲ್ಪಾವಧಿ ನೊಂದಣಿ ವ್ಯವಸ್ಥೆ ಮಾಡಲಾಗಿದ್ದು, ಒಂದು ದಿನ, ಮೂರು ದಿನ ಮತ್ತು ಒಂದು ವಾರದ ನೊಂದಣಿ ಕಾರ್ಡ ಪ್ರವಾಸಿಗರಿಗೆ ದೊರಯಲಿದೆ ಎಂದು ದಸರಾ ವಿಶೇಷಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಿ.ರಂದೀಪ್ ಅವರು ಶುಕ್ರವಾರ ಪತ್ತಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಹೆಚ್ಚಿನ ಸೈಕಲ್ ಸೇವೆ ಒದಗಿಸಲು ಅರಮನೆಯ ಬಲರಾಮ, ವರಾಹಾ ಮತ್ತು ಇತರ ಪ್ರಮುಖ ಸೈಕಲ್ ನಿಲ್ದಾಣಗಳ ಬಳಿ ಹೆಚ್ಚುವರಿ ಸೈಕಲ್ ಇಡಲಾಗುವುದು. ಸೈಕಲ್ ಪಡೆಯಲು ಗುರುತಿನ ಚೀಟಿ ಕಡ್ಡಾಯ ಇರಲಿದೆ. ಒಂದು ದಿನದ ಅಲ್ಪಾವಧಿ ಪಾಸಿಗಾಗಿ ರೂ 50 ನಿಗದಿಪಡಿಸಲಾಗಿದೆ. ಮೂರು ದಿನದ ಪಾಸಿಗಾಗಿ ರೂ 150 ನಿಗದಿಪಡಿಸಲಾಗಿದೆ. ಒಂದು ವಾರದ ಪಾಸಿಗಾಗಿ ರೂ. 150 ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಟ್ರಿಣ್ –ಟ್ರಿಣ್ ಸೈಕಲ್ ಪ್ರೋತ್ಸಾಹಿಸಲು ಹೋಟೇಲ್‍ಗಳಿಗೆ ನಿಗದಿತ ದರದಲ್ಲಿ ಸ್ಮಾ‍ರ್ಟ್ ಕಾರ್ಡ್ ವಿತರಿಸಲಾಗುವುದು. ಪ್ರವಾಸಿಗರಿಗೆ ಇದರಿಂದ ಅನುಕೂಲವಾಗಲಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಮಹಾನಗರ ಪಾಲಿಕೆ ಆಯುಕ್ತರಾ ಜಿ. ಜಗದೀಶ ಮತ್ತು ಪ್ರವಾಸೋದ್ಯಮ ಇಲಾಖೆ ಉಪ ನಿರ್ದೆಶಕ ಹೆಚ್.ಪಿ. ಜನಾರ್ದನ್ ಹಾಗೂ ಸೆಸ್ಕ್ ಜೆನೆರಲ್ ಮ್ಯಾನೇಜರ್ ಸತೀಶ್ ಅವರು ಉಪಸ್ಥಿತರಿದ್ದರು.

(ಎನ್.ಬಿ)

Leave a Reply

comments

Related Articles

error: