ಕರ್ನಾಟಕಪ್ರಮುಖ ಸುದ್ದಿ

ಪ್ರವಾಸೋದ್ಯಮ ನಿಗಮದಿಂದ ‘ಒಪ್ಪಂದ ಆಧಾರಿತ ವಾಹನ ಸೇವೆ’ ಪರಿಷ್ಕೃತ ದರಪಟ್ಟಿ ಪ್ರಕಟ

ಬೆಂಗಳೂರು, ಸೆ.16 : ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಸಾರಿಗೆ ವಿಭಾಗದಿಂದ ಒಪ್ಪಂದದ ಆಧಾರದ ಮೇರೆಗೆ ಒದಗಿಸುವ ವಾಹನಗಳ ಪರಿಷ್ಕೃತ ದರ ಪಟ್ಟಿಯನ್ನು ಪ್ರಕಟಿಸಲಾಗಿದೆ.

51 ಆಸನಗಳ ಮಲ್ಟಿ ಆಕ್ಸೆಲ್ ವಾಹನ ಹಾಗೂ 47 ಆಸನಗಳ ಮಲ್ಟಿಆಕ್ಸೆಲ್ ವಾಹನಕ್ಕೆ ಪ್ರತಿ ಕಿ.ಮೀ.ಗೆ ರೂ.65, (ಕನಿಷ್ಠ 300 ಕಿ.ಮೀ) 45 ಆಸನಗಳ ವೋಲ್ವೋ ವಾಹನಕ್ಕೆ ಪ್ರತಿ ಕಿ.ಮೀಗೆ 60 ರೂ. (ಕನಿಷ್ಟ 300 ಕಿ.ಮೀ), 39 ಆಸನಗಳ ಹವಾನಿಯಂತ್ರಿತ ಸುವಿಹಾರಿ ವಾಹನಕ್ಕೆ ಪ್ರತಿ ಕಿ.ಮೀ ರೂ. 50, (ಕನಿಷ್ಠ 250 ಕಿ.ಮೀ) 31 ಆಸನಗಳ ನಾನ್ ಎಸಿ ವಾಹನಕ್ಕೆ ಪ್ರತಿ ಕಿ.ಮೀ ಗೆ ರೂ 34 (ಕನಿಷ್ಟ 250 ಕಿ.ಮೀ) ಹಾಗೂ 18 ಆಸನ ಹಾಗೂ 15 ಆಸನಗಳ ಹವಾನಿಯಂತ್ರತ ವಾಹನಕ್ಕೆ ರೂ 25, (ಕನಿಷ್ಠ 200 ಕಿ.ಮೀ) ದರ ನಿಗದಿಪಡಿಸಲಾಗಿದೆ. ಸೂಚಿಸಿದ ಎಲ್ಲ ವಾಹನಗಳ ಪರಿಷ್ಕೃತ ದರಗಳ ಮೇಲೆ ಜಿಎಸ್‍ಟಿ ತೆರಿಗೆ ಶೇ.5 ರಷ್ಟು ಪ್ರತ್ಯೇಕವಾಗಿ ಪಾವತಿಸಬೇಕಾಗುತ್ತದೆ.

ಹೆಚ್ಚಿನ ವಿವರಗಳಿಗಾಗಿ ವೆಬ್‍ಸೈಟ್ www.kstdc.co ಮತ್ತು ದೂರವಾಣಿ ಸಂಖ್ಯೆ 8970650070 ಅಥವಾ 080-43344334 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ತಿಳಿಸಿದೆ.

(ಎನ್.ಬಿ)

Leave a Reply

comments

Related Articles

error: