ಮೈಸೂರು

ಸಾಹಿತ್ಯ ಅಧ್ಯಯನದಿಂದ ವಿಶಾಲ ಮನೋಧರ್ಮ ಬೆಳೆಯಲು ಸಾಧ‍್ಯ : ಪ್ರೊ.ಮೊರಬದ ಮಲ್ಲಿಕಾರ್ಜುನ

“ವಿದ್ಯಾರ್ಥಿ ದೆಸೆಯಿಂದಲೇ ನಿಷ್ಠೆ, ಬದ್ಧತೆಯನ್ನು ಬೆಳೆಸಿಕೊಂಡರೆ ಭವಿಷ್ಯದಲ್ಲಿ ಉಜ್ವಲತೆಯನ್ನು ಕಾಣಲು ಸಾಧ್ಯ” ಎಂದು ಪ್ರಾದೇಶಿಕ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ ಹೇಳಿದರು.

ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗದ ವತಿಯಿಂದ ಅ.28 ರಂದು ‘ಕನ್ನಡ ಸಾಹಿತ್ಯ ಅಧ‍್ಯಯನದ ಸ್ವರೂಪ’ ಎಂಬ ವಿಷಯದ ಬಗ್ಗೆ ಏರ್ಪಡಿಸಿದ್ದ ಉಪನ್ಯಾಸದಲ್ಲಿ ಮಾತನಾಡಿದ ಅವರು, “ಸಾಹಿತ್ಯದ ಅಧ್ಯಯನವು ವಿದ್ಯಾರ್ಥಿಗಳ ಅಂತರಂಗವನ್ನು ಅರಳುವಂತೆ ಮಾಡುತ್ತದೆ. ಕವಿರಾಜಮಾರ್ಗಕಾರ, ಆದಿಕವಿ ಪಂಪ, ವಚನಕಾರ ಬಸವಣ್ಣ, ರಾಷ್ಟ್ರಕವಿ ಜಿ.ಎಸ್ ಶಿವರುದ್ರಪ್ಪ, ಆಧುನಿಕ ಸಾಹಿತ್ಯ ಮೇರುಕವಿ ಕುವೆಂಪು ಅವರು ತಮ್ಮ ಸಾಹಿತ್ಯದಲ್ಲಿ ವಿಶ್ವ ವಿಶಾಲ ದೃಷ್ಠಿಕೋನವನ್ನು ಪ್ರತಿಬಿಂಬಿಸಿದ್ದಾರೆ. ನಮಗೆ  ಸಾಹಿತ್ಯ ಅಧ್ಯಯನದಿಂದ ಮಾತ್ರ ವಿಶಾಲ ಮನೋಧರ್ಮ ಬೆಳೆಯಲು ಸಾಧ್ಯ” ಎಂದು ಅವರು ತಿಳಿಸಿದರು.

ಶೈಕ್ಷಣಿಕ ಸಂಯೋಜಕ ಪ್ರೊ.ಕೆ.ಸತ್ಯನಾರಾಯಣ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಜಿ.ಪ್ರಸಾದಮೂರ್ತಿ, ಕನ್ನಡ ಪ್ರಾಧ್ಯಾಪಕರಾದ   ಸಂಧ‍್ಯಾರಾಣಿ ಎಂ.ಎಸ್. ರಾಣಿ ಕೆ.ಎನ್. ಬಸವಪ್ಪ ಉಪಸ್ಥಿತರಿದ್ದರು.

Leave a Reply

comments

Related Articles

error: