
ಕರ್ನಾಟಕಪ್ರಮುಖ ಸುದ್ದಿ
ಮೋಡ ಬಿತ್ತನೆ ಮಾಡುವುದರಿಂದ ಮಳೆ ಬರುವುದಿಲ್ಲ : ಸಚಿವ ಅನಂತಕುಮಾರ್ ಹೇಳಿಕೆ
ರಾಜ್ಯ(ಹುಬ್ಬಳ್ಳಿ)ಸೆ.16:-.ರಾಜ್ಯ ಸರ್ಕಾರ ಕೇವಲ ಮೋಡ ಬಿತ್ತನೆ ಮಾಡುವುದರಿಂದ ಮಳೆ ಬರುವುದಿಲ್ಲ ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತಕುಮಾರ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಮೋಡಬಿತ್ತನೆಯಿಂದ ಮಳೆ ಬರುವುದಿಲ್ಲ. ಮಳೆ ಬರಲು ಅರಣ್ಯ ರಕ್ಷಣೆ ಮಾಡಬೇಕು, ಪ್ರತಿ ಮನುಷ್ಯನಿಗೆ ನಾಲ್ಕು ಗಿಡಗಳನ್ನು ನೆಡಬೇಕು ಎಂದಿದ್ದಾರೆ. ಸತತ ಮೂರು ವರ್ಷಗಳಿಂದ ಬರಗಾಲದಿಂದ ರೈತರು ಕಂಗಾಲಾಗಿದ್ದಾರೆ.ಆದ್ದರಿಂದ ರಾಜ್ಯ ಸರ್ಕಾರ ಕೆರೆಗಳ ಸಂರಕ್ಷಣೆ ಮಾಡಬೇಕೆಂದು ಒತ್ತಾಯಿಸಿದರು. (ಕೆ.ಎಸ್,ಎಸ್.ಎಚ್)