ಮೈಸೂರು

ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರು ದುರ್ಬಳಕೆ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಿ

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇತ್ತೀಚೆಗೆ ಕುಲಸಚಿವರಾಗಿ ನೇಮಕಗೊಂಡಿರುವ ದಲಿತ ಸಮುದಾಯದ ಪ್ರೊ.ಆರ್.ರಾಜಣ್ಣ ಅವರ ಏಳಿಗೆಯನ್ನು ಸಹಿಸಿಕೊಳ್ಳಲಾಗದವರು ಕುಲಸಚಿವರ ಕಚೇರಿಯಲ್ಲಿನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರವನ್ನು ತೆಗೆದುಹಾಕಿದ್ದಾರೆ ಎಂದು ಇಲ್ಲಸಲ್ಲದ ಆಧಾರ ರಹಿತವಾದ ಆರೋಪವನ್ನು ಮಾಡಿ ವಿದ್ಯಾರ್ಥಿಗಳಿಗೆ ತಪ್ಪು ಮಾಹಿತಿ ನೀಡಿ ಅವರನ್ನು ಪ್ರಚೋದಿಸಿ ಪ್ರೊ.ರಾಜಣ್ಣನವರ ತೇಜೋವಧೆ ಮಾಡಿದ್ದಾರೆ ಎಂದು ಶ್ರೀವಾಲ್ಮೀಕಿ ನಾಯಕರ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ರಾಮನಾಯಕ ಜೆ. ಖಂಡಿಸಿದ್ದಾರೆ.
ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಕಲ್ಪಿಸಿದ ಮೀಸಲಾತಿಯಿಂದಲೇ ಪ್ರೊ.ರಾಜಣ್ಣ ಮೈಸೂರು ವಿವಿಯಲ್ಲಿ ಪ್ರೋಪೆಸರ್ ನಂತರ ರೀಡರ್ ಆಗಿ, ಪರೀಕ್ಷಾಂಗ ಕುಲಸಚಿವರಾಗಿ ಈಗ ಕುಲಸಚಿವರಾಗಿ ನೇಮಕವಾಗಿದ್ದು ಹಂತಹಂತವಾಗಿಯೇ ಮೇಲ್ಬಂದಿದ್ದಾರೆ ಎಂದು ತಿಳಿಸಿದ್ದಾರೆ. ವಿವಿಯ ವಿದ್ಯಾರ್ಥಿಗಳಲ್ಲದ ಕೆಲವು ಕಿಡಿಗೇಡಿಗಳು ಅಂಬೇಡ್ಕರ್ ಹೆಸರನ್ನು ದುರ್ಬಳಕೆ ಮಾಡಿಕೊಂಡು ಪ್ರತಿಭಟನೆ ಹೆಸರಿನಲ್ಲಿ ಒತ್ತಾಯ ಪೂರ್ವಕವಾಗಿ ತರಗತಿಗಳನ್ನು ಮುಚ್ಚಿಸಿ ಅಶಾಂತಿ ಸೃಷ್ಠಿಸುತ್ತಿದ್ದು ಸರ್ಕಾರಈ ಕೂಡಲೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಿ ವಿವಿಯಲ್ಲಿ ಶಾಂತಿ ಸಾಮರಸ್ಯ ಕಾಪಾಡಬೇಕು ಎಂದು ಆಗ್ರಹಿಸಿದ್ದಾರೆ.

Leave a Reply

comments

Related Articles

error: