ಪ್ರಮುಖ ಸುದ್ದಿಮೈಸೂರು

ಆಯುರ್ವೇದ ಪದ್ಧತಿಯು ಸುರಕ್ಷಿತವಾಗಿದೆ : ಮಹಾಪೌರ ಬಿ.ಎಲ್.ಭೈರಪ್ಪ

ಬದಲಾದ ಜೀವನಶೈಲಿ ಹಾಗೂ ಕೆಲಸದ ಒತ್ತಡದಿಂದ  ಪ್ರಸ್ತುತ ದಿನಮಾನಗಳಲ್ಲಿ ಹಲವಾರು ದೈಹಿಕ ಹಾಗೂ ಮಾನಸಿಕ ಕಾಯಿಲೆಗಳು ದಾಳಿ ನಡೆಸುತ್ತಿವೆ.  ಅಲೋಪತಿ ಔಷಧಿ ಸೇವೆನೆಯಿಂದ ರೋಗ ಗುಣಮುಖವಾದರೂ ಅಡ್ಡಪರಿಣಾಮಗಳ ಸಂಭವನೀಯ ಹೆಚ್ಚಿದ್ದು ಭಾರತೀಯ ಆರ್ಯುವೇದ ಪದ್ಧತಿ ಸುರಕ್ಷಿತವಾಗಿದೆ ಎಂದು ಮಹಾಪೌರ ಬಿ.ಎಲ್.ಭೈರಪ್ಪ ತಿಳಿಸಿದರು.

ಅವರು, ಮೈಸೂರು ಜಿ.ಪಂ. ಹಾಗೂ ಆಯುಷ್ ವಿಭಾಗದ ವತಿಯಿಂದ ರಾಮಕೃಷ್ಣ ನಗರದ ‘ನಮನ’ ಉದ್ಯಾನವನದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಆಯುರ್ವೇದ ದಿನಾಚರಣೆ (ಧನ್ವಂತ್ರಿ ಜಯಂತಿ)ಯನ್ನು ಉದ್ಘಾಟಿಸಿ ಮಾತನಾಡಿ ಆಧುನಿಕ ಔಷಧ ಪದ್ಧತಿಗಿಂತ ಪಾರಂಪರಿಕ ಔಷಧ ಪದ್ದತಿ ಆಯುರ್ವೇದವನ್ನು ಅಳವಡಿಸಿಕೊಳ್ಳಬೇಕು.  ಇದು ರೋಗ ಬರದಂತೆ ತಡೆಗಟ್ಟಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲಿದೆ.  ಮಧುಮೇಹ ನಿಯಂತ್ರಣಕ್ಕೆ ಪರಿಣಾಮಕಾರಿ ಔಷಧ ಪದ್ಧತಿಯಾಗಿದೆ ಎಂದು ಈಗಾಗಲೇ ಸಂಶೋಧನೆಗಳಿಂದ ಸಾಬೀತಾಗಿದ್ದು ಆರೋಗ್ಯಪೂರ್ಣ ಜೀವನಕ್ಕೆ ಆಯುರ್ವೇದ ಶ್ರೇಷ್ಠ ಚಿಕಿತ್ಸಾ ಪದ್ಧತಿಯಾಗಿದೆ ಎಂದು ತಿಳಿಸಿದರು.

ಆಯುಷ್ ಇಲಾಖೆಯ ವೈದ್ಯರು ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಿ ಅವಶ್ಯಕತೆ ಇರುವವರಿಗೆ ಔಷಧವನ್ನು ವಿತರಿಸಿದರು.

Leave a Reply

comments

Related Articles

error: