ಮೈಸೂರು

ಸೆ,19ಕ್ಕೆ ಗಂಧದ ಉರುಸ್ ಷರೀಫ್ : ಮೆರವಣಿಗೆ

ಮೈಸೂರು,ಸೆ.16 : ಆಸ್ತಾನಾ – ಇ – ಸಲ್ಮಾನಿಯಾ ದರ್ಗಾ ಕಮಿಟಿಯು ಸೆ.19ರಂದು ಸಂಜೆ 7ಕ್ಕೆ ಗಂಧದ ಉರುಸ್ ಷರೀಫ್ ಅಲಂಕೃತ ಮೆರವಣಿಗೆಯನ್ನು ಲಷ್ಕರ್ ಮೊಹಲ್ಲಾದ ಸಂಘದ ಕಚೇರಿಯಲ್ಲಿ ಆಯೋಜಿಸಿದೆ.

ಲಷ್ಕರ್ ಮೊಹಲ್ಲಾದಿಂದ ಅಶೋಕ ರಸ್ತೆ, ಸಾಡೆ ರಸ್ತೆ, ಪುಲಿಕೇಶಿ ರಸ್ತೆ, ಫೌಂಟನ್ ಸರ್ಕಲ್ ಮೊದಲಾದ ಕಡೆ ಉರುಸ್  ನಡೆದು ಅಂತಿಮವಾಗಿ ಲಷ್ಕರ್ ಮೊಹಲ್ಲಾ ತಲುಪುವುದು.

ಮೌಲಾನಾ ಮೊಹಮ್ಮದ್ ಅನ್ವರ್ ಅಹಮದ್ ನಿಜಾಮಿ ಸಾಹೇಬ್ , ಸೂಫಿ ಸಂತ ಹಜರತ್ ಮೊಹಮ್ಮದ್ ಸಲ್ಮಾನ್ ಸಾಹೇಬ್ ವಿಸ್ಬಾಹಿ ಮೊದಲಾದವರು ಉರುಸ್ ಉಪನ್ಯಾಸದಲ್ಲಿ ಭಾಗವಹಿಸುವರು.

ಉರುಸ್ ಮೆರವಣಿಗೆಯಲ್ಲಿ ಅರೇಬಿಕ್ ಕಾಲೇಜು ವಿದ್ಯಾರ್ಥಿಗಳು, ಸೂಫಿ ಸಂತರು, ಮೌಲ್ವಿಗಳು, ಉಲ್ಮಾಗಳು, ಇಸ್ಲಾಂ ವಿದ್ವಾಂಸರು, ಅಹಲೆ ಸುನ್ನತೋ ಸಮಾತ್ ದರ್ವೇಶ್ ಮೊದಲಾದವರು ಪಾಲ್ಗೊಳ್ಳುವರು . (ಕೆ.ಎಂ.ಆರ್)

Leave a Reply

comments

Related Articles

error: