ಮೈಸೂರು

ಮಕ್ಕಳಿಗೆ ನೈತಿಕ ಶಿಕ್ಷಣ ನೀಡುವ ಅಗತ್ಯವಿದೆ : ಮೇನಕಾ ಗಾಂಧಿ

menaka2ಪ್ರತಿ ಶಾಲೆಯಲ್ಲೂ ಹಿಂದೆಲ್ಲ ನೈತಿಕ ಶಿಕ್ಷಣದ ಮೂಲಕ ಬದುಕಿನ ಪಾಠವನ್ನು ತಿಳಿಸಿಕೊಡಲಾಗುತ್ತಿತ್ತು. ಆದರೆ ಇಂದು ಅವೆಲ್ಲ ಮರೆಯಾಗಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಖೇದ ವ್ಯಕ್ತಪಡಿಸಿದರು.

ಮೈಸೂರಿನ ಊಟಿ ರಸ್ತೆಯ ಜೆ.ಎಸ್.ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಸುವರ್ಣಮಹೋತ್ಸವ ಸಮಾರೋಪ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮೇನಕಾ ಗಾಂಧಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳಲ್ಲಿ ನೈತಿಕ ಶಿಕ್ಷಣವನ್ನು ಮೈಗೂಡಿಸುವ ಶಿಕ್ಷಣ ನೀಡುವ ಅಗತ್ಯವಿದೆ. ಇಂಗ್ಲಿಷ್, ಗಣಿತ, ಸಮಾಜವಿಜ್ಞಾನ ಇವನ್ನೆಲ್ಲ ಯಾರು ಎಲ್ಲಿ ಬೇಕಾದರೂ ಕಲಿಯಬಹುದಾಗಿದೆ. ಆದರೆ ಜೀವನ ಸಾಂಸ್ಕೃತಿಕ ಮೌಲ್ಯಗಳನ್ನು ತಿಳಿಸುವ ಶಿಕ್ಷಣ ಇಂದಿನ ಮಕ್ಕಳಿಗೆ ಬೇಕಿದೆ ಎಂದರು.

ಧ್ಯಾನ ಮತ್ತು ಯೋಗ ಶಿಕ್ಷಣವು ಮಕ್ಕಳಲ್ಲಿ ಆತ್ಮ ವಿಶ್ವಾಸವನ್ನು ವೃದ್ಧಿಸುತ್ತದೆ. ಪಾಶ್ಚಿಮಾತ್ಯ ದೇಶಗಳು ಮಕ್ಕಳು ಅವರಿಷ್ಟದ ವಿಷಯ ಕಲಿಯಲು 2-3 ವಾರಗಳ ಕೋರ್ಸ್ ಪರಿಚಯಿಸಿದ್ದು, ಒಂದು ತಂಡದಲ್ಲಿ ಹತ್ತು ಮಕ್ಕಳಿರುತ್ತಾರೆ. ನಮ್ಮ ದೇಶದಲ್ಲಿಯೂ ಅಂತಹ ಕೋರ್ಸ್ ನ ಅವಶ್ಯಕತೆ ಇದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸುವರ್ಣದೀಪ್ತಿ ಸ್ಮರಣ ಸಂಚಿಕೆ, ಎಸ್.ಟಿ.ಶೈಲಜಾ ಅವರ ಶರಣ ಸಂಸ್ಕೃತಿ-ಸಾಹಿತ್ಯ ವಿಮರ್ಶೆ ಮತ್ತು ವ್ಯಕ್ತಿ ಚಿತ್ರಗಳು ಕೃತಿಯನ್ನು ಲೋಕಾರ್ಪಣೆಗೊಳಿಸಲಾಯಿತು.

ಶಿವರಾತ್ರಿ ದೇಶೀಕೇಂದ್ರ ಸ್ವಾಮಿಜಿ, ಲೋಕೋಪಯೋಗಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಸಹಕಾರ ಸಚಿವ ಎಚ್.ಎಸ್.ಮಹದೇವಪ್ರಸಾದ್, ಕಾಂಗ್ರೆಸ್ ಮುಖಂಡ ಹೆಚ್.ವಿಶ್ವನಾಥ ಮತ್ತಿತರರು ಉಪಸ್ಥಿತರಿದ್ದರು.

 

 

Leave a Reply

comments

Related Articles

error: