ಕರ್ನಾಟಕ

ಗೌರಿ ಲಂಕೇಶ್‍ರವರ ಹತ್ಯೆಯನ್ನು ಖಂಡಿಸಿ ಚಿತ್ರ ಬಿಡಿಸುವ ಮೂಲಕ ಪ್ರತಿಭಟನೆ

ರಾಜ್ಯ(ಚಾಮರಾಜನಗರ)ಸೆ.16:- ಗೌರಿ ಲಂಕೇಶ್‍ರವರ ಹತ್ಯೆಯನ್ನು ಖಂಡಿಸಿ ಯಳಂದೂರು ಪಟ್ಟಣದ ಬಸ್ ನಿಲ್ದಾಣದಲ್ಲಿ ಯಳಂದೂರು ಚಿತ್ರ ಕಲಾವಿದರು ಗೌರಿಯವರ ಚಿತ್ರ ಬಿಡಿಸುವ ಮೂಲಕ ಪ್ರತಿಭಟನೆ ನಡೆಸಿದರು.

ಬಿಎಸ್‍ಪಿ ಪಕ್ಷದ ರಾಜ್ಯಾಧ್ಯಕ್ಷ ಎನ್. ಮಹೇಶ್ ಮಾತನಾಡಿ, ಗೌರಿ ಹತ್ಯೆಯನ್ನು ಇಡೀ ವಿಶ್ವವೇ ಖಂಡಿಸುತ್ತಿದೆ. ಇದನ್ನು ವಿರೋಧಿಸಿ ಅಮೆರಿಕಾ ಸೇರಿದಂತೆ ಅನೇಕ ದೇಶಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಆದರೆ ದೇಶದಲ್ಲಿ ವಿಭಿನ್ನ ಎನ್ನುವಂತೆ ಯಳಂದೂರು ತಾಲ್ಲೂಕಿನ ಚಿತ್ರ ಕಲಾವಿದರು. ಗೌರಿಯವರ ಚಿತ್ರವನ್ನು ದೊಡ್ಡ ಕ್ಯಾನ್ವಾಸ್ ಮೇಲೆ ಬಿಡಿಸಿ. ನಾನು ಗೌರಿ, ನಾವೆಲ್ಲಾ ಗೌರಿ ಎಂಬ ಶೀರ್ಷಿಕೆ ಬರೆದು ವಿಭಿನ್ನವಾಗಿ ಗೌರಿ ಹಂತಕರನ್ನು ಶೀಘ್ರ ಬಂಧಿಸಿ ಎಂಬ ಸಂದೇಶ ರವಾನಿಸಿದರು.

ರಾಜ್ಯದ ಪೊಲೀಸ್ ಇಲಾಖೆ, ಗುಪ್ತಚರ ಇಲಾಖೆ ಸಂಪೂರ್ಣ ಸೋತಿದೆ. ಸಮಾಜದಲ್ಲಿ ವಿಚಾರವಂತರು ಸಾವಿಗೀಡಾಗುತ್ತಿರುವುದು ವಿಷಾದನೀಯವಾಗಿದೆ. ಹತ್ಯೆಯನ್ನು ಸಂಭ್ರಮಿಸುವ ಸಾಮಾಜಿಕ ಜಾಲತಾಣದ ಕೆಲ ವರ್ಗಕ್ಕೆ ಹಂತಕರನ್ನು ಹಿಡಿಯುವ ಮೂಲಕ ಸ್ಪಷ್ಟ ಸಂದೇಶ ರವಾನೆಯಾಗಬೇಕಿದೆ. ಅನಗತ್ಯ ಟೀಕೆ, ಟಿಪ್ಪಣಿ ನಿಲ್ಲಬೇಕಾದರೆ ಕೊಲೆಗುಡಕರನ್ನು ಹಿಡಿಯುವ ನೇರ ಹೊಣೆಯನ್ನು ಮುಖ್ಯಮಂತ್ರಿಗಳು ವಹಿಸಿಕೊಂಡು ಅವರನ್ನು ಬಹಿರಂಗವಾಗಿ ತೋರಿಸುವ ಮೂಲಕ ಇಂತಹ ಕೃತ್ಯಕ್ಕೆ ಕುಮಕ್ಕು ನೀಡುವ ಶಕ್ತಿಗಳಿಗೆ ಸ್ಪಷ್ಟ ಸಂದೇಶ ರವಾನೆ ಮಾಡಬೇಕಿದೆ.

ಕಲಾವೃಕ್ಷ ಸಂಘದ ಅಧ್ಯಕ್ಷ ಮದ್ದೂರು ಅನಂತು ಕಲಾವಿದರಾದ ಪಿ. ಮಾದೇಶ್, ಅಪ್ಸರ್‍ಖಾನ್, ಯರಗಂಬಳ್ಳಿ ಲೊಕೇಶ್ ರಾಚು, ಶ್ರೀನಿವಾಸ್, ಡಿಎಸ್‍ಎಸ್ ರಾಜಣ್ಣ, ಮದ್ದೂರು ಚಕ್ರವರ್ತಿ, ಜಯಣ್ಣ ಇತರರು ಇದ್ದರು. (ಜಿ.ಎನ್,ಎಸ್.ಎಚ್)

Leave a Reply

comments

Related Articles

error: