ಮೈಸೂರು

ಕಾನೂನು ಮಾಪನ ನಿರೀಕ್ಷಕ ಎಸಿಬಿ ಬಲೆಗೆ

ಮೈಸೂರಿನ  ಶ್ರೀರಾಂಪುರ ಕಾನೂನು ಮಾಪನ ಕಚೇರಿಯಲ್ಲಿ ಅಧಿಕಾರಿಯೋರ್ವರು ಲಂಚ ಸ್ವೀಕರಿಸುವ ವೇಳೆ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಕಾನೂನು ಮಾಪನ ಕಚೇರಿಯ ನಿರೀಕ್ಷಕ  ಮಹದೇವಸ್ವಾಮಿ ಎಂಬವರೇ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದವರಾಗಿದ್ದು, ತೂಕ ಮಾಪನಗಳನ್ನು ದೃಢಪಡಿಸಿಕೊಳ್ಳಲು ಮಹಮ್ಮದ್ ಉಮರ್ ಎಂಬವರಿಂದ 8,025ರೂ.ಗಳ ಲಂಚ ಸ್ವೀಕರಿಸುತ್ತಿದ್ದರು. ಖಚಿತ ಮಾಹಿತಿಯನ್ನು ಪಡೆದ ಎಸಿಬಿ ಅಧಿಕಾರಿಗಳು ಶುಕ್ರವಾರ ರಾತ್ರಿ  ದಾಳಿ ನಡೆಸಿದ್ದು ಅವರಿಂದ ಯಾವುದೇ ದಾಖಲೆಗಳಿಲ್ಲದ 8,025ರೂ,ಗಳನ್ನು ವಶಕ್ಕೆ ಪಡೆದಿದ್ದಾರೆ.

ದಾಳಿಯಲ್ಲಿ ಎಸಿಬಿ ಅಧಿಕಾರಿಗಳಾದ ಗಜೇಂದ್ರ ಪ್ರಸಾದ್, ಅನಿಲ್ ಕುಮಾರ್, ವಿನಯ್ ಪಾಲ್ಗೊಂಡಿದ್ದರು

Leave a Reply

comments

Related Articles

error: