ಮೈಸೂರು

ನಕಲಿ ಚಿನ್ನ ನೀಡಿ ಅಸಲಿ ಚಿನ್ನ ಎಗರಿಸಿದ ಭೂಪರು

ಸಹೋದರಿ ಅನಾರೋಗ್ಯದಲ್ಲಿದ್ದಾಳೆ. ಆಕೆಯ ಚಿಕಿತ್ಸೆಗೆ ಹಣದ ಅವಶ್ಯಕತೆ ಇದೆ ಎಂದು ಹೇಳಿ ನಕಲಿ ಒಡವೆ ನೀಡಿ ಅಸಲಿ ಆಭರಣ ಎಗರಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಅಗ್ರಹಾರದ ನಿವಾಸಿ ಕಮಲಮ್ಮ 30ಗ್ರಾಂ ಅಸಲಿ ಚಿನ್ನವನ್ನು ಕಳೆದುಕೊಂಡ ಮಹಿಳೆಯಾಗಿದ್ದಾರೆ. ಅವರು ಕೆ.ಆರ್.ಆಸ್ಪತ್ರೆಗೆ ಬಂದಾಗ ಈ ಘಟನೆ ನಡೆದಿದೆ. ಆಸ್ಪತ್ರೆಯಿಂದ ಮನೆಗೆ ಮರಳುತ್ತಿದ್ದ ವೇಳೆ ಚಿಕ್ಕಗಡಿಯಾರದ ಬಳಿ 60ವರ್ಷದ ವೃದ್ಧೆಯೋರ್ವರು ಕಮಲಮ್ಮ ಅವರಿಗೆ ಎದುರಾಗಿದ್ದು, ಕೆ.ಆರ್.ಆಸ್ಪತ್ರೆಯ ವಿಳಾಸ ಕೇಳುವ ನೆಪದಲ್ಲಿ ಮಾತಿಗಿಳಿದಿದ್ದಾರೆ ಎನ್ನಲಾಗಿದೆ.

ಬಳಿಕ ತನ್ನ ಬಳಿ ಇರುವ ಕಾಸಿನ ಸರ ಗಿರವಿ ಅಂಗಡಿಯಲ್ಲಿ ಅಡವಿಡಲು ಹೋದರೆ ಕಡಿಮೆ ಬೆಲೆ ನೀಡುತ್ತಾರೆ. ಅದಕ್ಕಾಗಿ ನನ್ನ ಹೆಚ್ಚಿನ ತೂಕದ ಕಾಸಿನ ಸರವನ್ನು ನೀವು ಇಟ್ಟುಕೊಂಡು ಕಡಿಮೆತೂಕದ ನಿಮ್ಮ ಕಾಸಿನ ಸರವನ್ನು ನನಗೆ ನೀಡಿ ಎಂದಿದ್ದಾರೆ. ಅದೇ ಸಮಯ ಅಲ್ಲಿಗೆ ವ್ಯಕ್ತಿಯೋರ್ವ ಆಗಮಿಸಿದ್ದು  ತಾನು ಚಿನ್ನ-ಬೆಳ್ಳಿ ತಯಾರಕ ಎಂದು ಹೇಳಿಕೊಂಡಿದ್ದು ವೃದ್ಧೆ ನೀಡಿದ ಕಾಸಿನ ಸರ ಅಸಲಿ ಎಂದು ಕಮಲಮ್ಮನವರನ್ನು ನಂಬಿಸಿದ್ದಾನೆ. ಕಮಲಮ್ಮ ಇದನ್ನು ನಂಬಿ ಅವರಿಗೆ ಅಸಲಿ ಚಿನ್ನಾಭರಣವನ್ನು ನೀಡಿ ಅವರಲ್ಲಿದ್ದ ಆಭರಣವನ್ನು ಮನೆಗೊಯ್ದಿದ್ದಾರೆ. ಮನೆಗೆ ಬಂದು ಎಲ್ಲವನ್ನೂ ವಿವರಿಸಿದ್ದಾರೆ. ಕಮಲಮ್ಮನವರ ಮಕ್ಕಳು ಸರವನ್ನು ಚಿನ್ನದ ಅಂಡಿಗೆ ಕೊಂಡೊಯ್ದು ಪರಿಶೀಲಿಸಲಾಗಿ ಅದು ನಕಲಿ ಆಭರಣ ಎನ್ನುವುದು ತಿಳಿದು ಬಂದಿದೆ.

ದೇವರಾಜ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

comments

Related Articles

error: