ಪ್ರಮುಖ ಸುದ್ದಿಮೈಸೂರು

ಈ ಬಾರಿ ಎರಡು ಸ್ಥಳಗಳಲ್ಲಿ ಆಹಾರ ಮೇಳ :ಆಹಾರ ಪ್ರಿಯರಿಗೆ ಉಣಬಡಿಸಲು ವೇದಿಕೆ ಸಿದ್ಧ : ಡಿ.ರಂದೀಪ್

ಮೈಸೂರು,ಸೆ.17:- ನಾಡ ಹಬ್ಬ ದಸರಾ ಮಹೋತ್ಸವದ ಹಿನ್ನಲೆಯಲ್ಲಿ ಈ ಬಾರಿ ಎರಡು ಸ್ಥಳಗಳಲ್ಲಿ ಆಹಾರ ಮೇಳ ನಡೆಯಲಿದ್ದು,  ಬುಡಕಟ್ಟು, ಸಿರಿಧಾನ್ಯ ಸಾವಯವ ಸೇರಿದಂತೆ ಆಹಾರ ಪ್ರಿಯರಿಗೆ ಉಣಬಡಿಸಲು ವೇದಿಕೆ ಸಿದ್ಧವಾಗಿದೆ ಎಂದು ಜಿಲ್ಲಾಧಿಕಾರಿ ರಂದೀಪ್ ತಿಳಿಸಿದರು.

ದಸರಾ ಆಹಾರ ಉಪಸಮಿತಿ ಹಾಗೂ ಸ್ವಾಗತ ಸಮಿತಿಯ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು ಇದೇ ಮೊದಲ ಬಾರಿಗೆ ಎರಡು ಸ್ಥಳಗಳಲ್ಲಿ ಅಂದರೆ ಸ್ಕೌಟ್ಸ್ ಅಂಡ್ ಗೈಡ್ಸ ಮೈದಾನ ಹಾಗೂ ಲಲಿತಮಹಲ್ ಪ್ಯಾಲೇಸ್ ಪಕ್ಕದ ಮುಡಾ ಪಾರ್ಕ್ ಬಳಿ ಆಹಾರ ಮೇಳವನ್ನು ಆಯೋಜಿಸಲಾಗಿದೆ. ಸ್ಕೌಟ್ಸ್ ಅಂಡ್ ಗೈಡ್ಸ ಮೈದಾನ 21 ರಿಂದ 28 ವರಗೆ ಹಾಗೂ ಲಲಿತಮಹಲ್ ಪ್ಯಾಲೇಸ್ ಪಕ್ಕದ ಮುಡಾ ಪಾರ್ಕ್ ಬಳಿ 21 ರಿಂದ 30 ವರಗೆ ನಡೆಯಲಿದೆ. ಹಸಿದ ಒಡಲಿಗೆ ಅನ್ನಭಾಗ್ಯ ಎಂಬುದು ಈ ಬಾರಿಯ ಆಹಾರ ಮೇಳದ ಸಂದೇಶವಾಗಿದೆ. ಈ ಆಹಾರ ಮೇಳದ ಜೊತೆಗೆ ನಳಪಾಕ ಅಡುಗೆ ಸ್ಪರ್ಧೆ, ಸವಿಭೋಜನ ಸ್ಪರ್ಧೆ, ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಆಹಾರ ಮೇಳದ ಉಪಸಮಿತಿ ಕಾರ್ಯಾಧ್ಯಕ್ಷ ಡಾ.ಕಾ.ರಾಮೇಶ್ವರಪ್ಪ ಮಾತನಾಡಿ ಬಂಬೂ ಬಿರಿಯಾನಿಗೆ ಹೆಚ್ಚಿನ ಬೇಡಿಕೆ ಇದ್ದು, ಅದರ ತಯಾರಿಗೆ ಎಲ್ಲಾ ರೀತಿಯಲ್ಲಿಯೂ ಸಜ್ಜಾಗುತ್ತಿದೆ. ಆಯಧ ಪೂಜೆ ಹಾಗೂ ದಶಮಿಯ ದಿನದಂದು ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ ಆದ್ದರಿಂದ ಅವರಿಗೆ ಅನುಕೂಲವಾಗಲೆಂದು ಈ ಲಲಿತ ಮಹಲ್ ಪಕ್ಕ ಆಹಾರ ಮೇಳವನ್ನು ಆಯೋಜಿಸಲಾಗಿದೆ. ಈ ಆಹಾರ ಮೇಳದಲ್ಲಿ ಸಂದೇಶ ಪ್ರಿನ್ಸ್ ಹಾಗೂ ಮರ್ ಕ್ಯೂರಿ ಹೋಟೆಲ್ ಗಳು ಹಾಗೂ ಡಾಲ್ಫಿನ್ ಗಳು ಭಾಗವಹಿಸಲಿವೆ. ಆಹಾರ ಪ್ರಿಯರ ಮನಸ್ಸಿಗೆ ಮುದ ನೀಡಲು ಕಾಮಿಡಿ ದಯಾನಂದ್ ಹಾಗೂ ಪ್ರಸಿದ್ಧ ಕಿರುತರೆ ನಟ ನಟಿಯರೂ ಕೂಡ ಆಗಮಿಸಲಿದ್ದಾರೆ. ನಮಗೆ 300 ಅರ್ಜಿಗಳ ಬಂದಿದ್ದು, ಈಗಾಗಲೇ ಸ್ಕೌಟ್ಸ್ ಅಂಡ್ ಗೈಡ್ಸ ಮೈದಾನದಲ್ಲಿ 72 ಮಳಿಗೆ ಹಾಗೂ ಲಲಿತಮಹಲ್ ಪ್ಯಾಲೇಸ್ ಪಕ್ಕದ ಮುಡಾ ಪಾರ್ಕ್ ಬಳಿ 75 ಮಳಿಗೆಗಳು ಭರ್ತಿಯಾಗಿದೆ ಎಂದು ಮಾಹಿತಿ ನೀಡಿದರು. ಇದೇ ಸಂದರ್ಭ ನಾಡ ಹಬ್ಬ ಮೈಸೂರು ದಸರಾ 2017 ರ ಆತ್ಮೀಯ ಆಮಂತ್ರಣವನ್ನು ಬಿಡುಗಡೆಗೊಳಿಸಿದರು.         (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: