ಮೈಸೂರು

ಜಂಬೂಸವಾರಿ ಆನೆಗೆ ಮರದ ಅಂಬಾರಿ ತಾಲೀಮು

ಮೈಸೂರು,ಸೆ.18:- ಮೈಸೂರು ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಇಂದಿನಿಂದ ಜಂಬೂಸವಾರಿ ಆನೆಗೆ ಮರದ ಅಂಬಾರಿ ತಾಲೀಮು ನಡೆಯಲಿದ್ದು, ಸೋಮವಾರ ಬೆಳಿಗ್ಗೆ ತಾಲೀಮು ನಡೆಸಲಾಯಿತು.

ಮೈಸೂರು ಅರಮನೆಯಿಂದ ಬನ್ನಿ ಮಂಟಪದ ವರೆಗೆ ಆನೆಗಳು ತೆರಳಿದ್ದು, ಅರಣ್ಯ ಸಿಬ್ಬಂದಿಗಳು ಅರ್ಜುನ ಆನೆ ಮೇಲೆ ಮರದ ಅಂಬಾರಿ ಇರಿಸಿ ಮುನ್ನಡೆಸಿದ್ದಾರೆ. ಈವರೆಗೆ ಮರಳಿನ ಮೂಟೆಯನ್ನು ಹೊರುವ ತಾಲೀಮು ನಡೆಸಲಾಗುತ್ತಿತ್ತು. ಇಂದಿನಿಂದ ಮರದ ಅಂಬಾರಿಯನ್ನು ಕಟ್ಟಿ ಅದರಲ್ಲಿ ಮರಳಿನ ಮೂಟೆಗಳನ್ನು ಇರಿಸಿ ತಾಲೀಮು ನಡೆಸಲಾಗುತ್ತದೆ.

ಅರ್ಜುನನಿಗೆ ಕಾವೇರಿ,  ವರಲಕ್ಷ್ಮಿ ಸಾಥ್ ನೀಡಿದ್ದಾರೆ. ಅರಮನೆ ಆವರಣದ ಕ್ರೇನ್ ಬಳಿ ಮರದ ಅಂಬಾರಿಗೆ ಅರಣ್ಯಾಧಿಕಾರಿ ಏಡುಕೊಂಡುಲು ಮತ್ತು ವೈದ್ಯಾಧಿಕಾರಿ ಡಾ.ನಾಗರಾಜ್ ಪೂಜೆ ಸಲ್ಲಿಸಿದರು. (ಆರ್.ವಿ,ಕೆ.ಎಸ್,ಎಸ್.ಎಚ್)

Leave a Reply

comments

Related Articles

error: