ಮೈಸೂರು

ಪ್ರವಾಸಿಗರಿಗೆ ಸ್ವಚ್ಛ ಮೈಸೂರಿನ ಅನುಭವಕ್ಕಾಗಿ ಮಹಾನಗರ ಪಾಲಿಕೆಯಿಂದ ವಿಶೇಷ ಕಾರ್ಯಾಚರಣೆ

ಮೈಸೂರು,ಸೆ.18:- ಮೈಸೂರು ದೇಶದ ಗಮನ ಸೆಳೆದ ಸ್ವಚ್ಛ ನಗರವಾಗಿದ್ದು ದಸರೆ ವೇಳೆಯೂ ಪ್ರವಾಸಿಗರಿಗೆ ಸ್ವಚ್ಛ ಮೈಸೂರಿನ ಅನುಭವಕ್ಕಾಗಿ ಮಹಾನಗರ ಪಾಲಿಕೆ ವಿಶೇಷ ಕಾರ್ಯಾಚರಣೆ ಆರಂಭಿಸಿದೆ.

ಭಾನುವಾರ ಶಾಸಕ ಎಂ.ಕೆ. ಸೋಮಶೇಖರ್, ಮಹಾಪೌರರಾದ ಎಂ.ಜೆ. ರವಿಕುಮಾರ್, ದಸರಾ ವಿಶೇಷಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಡಿ. ರಂದೀಪ್, ಮಹಾನಗರ ಪಾಲಿಕೆ ಆಯುಕ್ತ ಜಿ.ಜಗದೀಶ ಅವರು ಅರಮನೆ ಉತ್ತರ ದ್ವಾರದ ( ಬಲರಾಮ) ಬಳಿ ಸ್ವಚ್ಛತಾ ವಿಶೇಷ ಕಾರ್ಯಾಚರಣೆಗೆ ಚಾಲನೆ ನೀಡಿದರು.

ಈ ಸಂದರ್ಭ ಮಹಾನಗರ ಪಾಲಿಕೆ ಆಯುಕ್ತ‌ ಜಿ. ಜಗದೀಶ ಮಾತನಾಡಿ, ಜಗತ್ತಿನ ವಿವಿಧೆಡೆಗಳಿಂದ ‌ಪ್ರವಾಸಿಗರು ಮೈಸೂರಿನ ಕಡೆ ಮುಖ ಮಾಡಿದ್ದಾರೆ, ದಸರಾ ಮಹೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದೆ. ಮಹಾನಗರ ಪಾಲಿಕೆ ಪ್ರತಿನಿತ್ಯ ಪ್ರವಾಸಿಗರಿಗೆ ಸ್ವಚ್ಛ ಮೈಸೂರಿನ ದರ್ಶನ ಮಾಡಿಸಲು ವಿಶೇಷ ಕಾರ್ಯಾಚರಣೆ ನಡೆಸಲಿದೆ.  ಮೊದಲ ಬಾರಿಗೆ 280 ಜನರನ್ನು ರಾತ್ರಿ ವೇಳೆ ಸ್ವಚ್ಛತಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ನಗರದಲ್ಲಿ ಕಾರ್ಯಕ್ರಮಗಳು ನಡೆಯುವ ಸ್ಥಳಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದ್ದು, ರಾತ್ರಿ 9 ರಿಂದ ಸಂಪೂರ್ಣ ಸ್ವಚ್ಛವಾಗುವವರೆಗೂ ಕಾರ್ಯಾಚರಣೆ ಮುಂದುವರಿಯಲಿದೆ. ಈ ಸ್ವಚ್ಛತಾ ಕಾರ್ಯ ಅಕ್ಟೋಬರ್ 2 ರ ವರೆಗೂ ಜಾರಿಯಲ್ಲಿ ಇರಲಿದೆ ಎಂದು ತಿಳಿಸಿದರು. ಈ ಸಂದರ್ಭ ವಿವಿಧ  ಇಲಾಖೆಗಳ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: