ಪ್ರಮುಖ ಸುದ್ದಿಮೈಸೂರು

ದಸರಾ ವಸ್ತು ಪ್ರದರ್ಶನ : ‘ಆರೋಗ್ಯ ಇಲಾಖೆ ಮಳಿಗೆ’ ಉದ್ಘಾಟನೆ

ಕರ್ನಾಟಕ ವಸ್ತು ಪ್ರದರ್ಶನ ಆವರಣದ ಅಭಿವೃದ್ಧಿ  ಕಾಮಗಾರಿಯನ್ನು 15 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.

ಅವರು, ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ಮಿಸಿರುವ ಆರೋಗ್ಯ ಇಲಾಖೆ ಮಳಿಗೆ ಮತ್ತು ನವೀಕೃತ ಪಿ.ಕಾಳಿಂಗರಾವ್ ಗಾನ ಮಂಟಪವನ್ನು ಉದ್ಘಾಟಿಸಿ ಮಾತನಾಡಿದರು. ಈಗಾಗಲೇ ಎರಡು ಕೋಟಿ ರೂ ವೆಚ್ಚದಲ್ಲಿ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ, 96 ಲಕ್ಷ ರೂ ವೆಚ್ಚದಲ್ಲಿ ಪಿ.ಕಾಳಿಂಗರಾವ್ ಗಾನ ಮಂಟಪ ಹಾಗೂ 170 ಮಳಿಗೆಗಳನ್ನು ನಿರ್ಮಾಣ ಮಾಡಲಾಗಿದೆ ಎಂದರು.

ಶಾಸಕ ವಾಸು, ಜಿಪಂ ಅಧ್ಯಕ್ಷೆ ನಯೀಮಾ ಸುಲ್ತಾನ ನಜೀರ್ ಅಹಮದ್, ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಮೂರ್ತಿ, ಸಿಇಒ ಶಶಿಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ  ಹಿರಿಯ ಚಲನಚಿತ್ರ ನಟ ಹಾಗೂ ಬಿಜೆಪಿ ಮುಖಂಡ ಮುಖ್ಯಮಂತ್ರಿ ಚಂದ್ರು, ರಂಗಾಯಣ ಮಾಜಿ ನಿರ್ದೇಶಕ ರಾಜಾರಾಂ ಅವರನ್ನು ಸನ್ಮಾನಿಸಲಾಯಿತು. ರಂಗಾಯಣದ ರಾಜಾರಾಂ ನಿರ್ದೇಶನದ ಮುಖ್ಯಮಂತ್ರಿ ಚಂದ್ರು ಅಭಿನಯದ ‘ಮುಖ್ಯಮಂತ್ರಿ’ ನಾಟಕ ಪ್ರದರ್ಶನಗೊಂಡಿತು.

ಡಾ.ಹೆಚ್.ಸಿ.ಮಹದೇವಪ್ಪನವರಿಂದ ಮೈಸೂರು ದಸರಾ ವಸ್ತು ಪ್ರದರ್ಶನದಲ್ಲಿ ಆರೋಗ್ಯ ಇಲಾಖೆ ಮಳಿಗೆ ಉದ್ಘಾಟನೆ

lny_9628

Leave a Reply

comments

Related Articles

error: