ಮೈಸೂರು

ಗೋಶಾಲೆಗೆ ಚಾಲನೆ : ಗೋವುಗಳ ಪೋಷಣೆ ಮಾಡುತ್ತಿರುವುದು ಶ್ಲಾಘನೀಯ ; ಚೆನ್ನಬಸವ ಸ್ವಾಮೀಜಿ

ಮೈಸೂರು(ನಂಜನಗೂಡು)ಸೆ.18:- ಸಹಕಾರ ಸಂಘದ ಐನೂರು ಮಂದಿ ಸೇರಿ ಹಿತ್ತಲ ಮತ್ತು ಕೊಟ್ಟಿಗೆಯನ್ನು ಗೋಶಾಲೆಯನ್ನಾಗಿ ನಿರ್ಮಿಸಿದ್ದು, ಅದನ್ನು ಸಹಕಾರ ಸಂಘಕ್ಕೆ ದಾನ ಮಾಡಿದ್ದು, ಚೆನ್ನಬಸವ ಸ್ವಾಮೀಜಿಗಳು 23ರಾಸುಗಳನ್ನು ದಾನವಾಗಿ ನೀಡುವ ಮೂಲಕ ಸಂಘಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಇತ್ತೀಚಿಗೆ ರೈತರು ಹೆಚ್ಚು ಕಷ್ಟಪಡುತ್ತಿದ್ದಾರೆ. ಬರದ ಪರಿಸ್ಥಿತಿಯನ್ನು ಎದುರಿಸುತ್ತ ದ್ದರೂ ತಮ್ಮ ಜಮೀನಿನಲ್ಲಿ ಹಸಿರು ದೊರಕದಿದ್ದರೂ ರಾಸುಗಳನ್ನು ಕಷ್ಟದಿಂದ ಸಾಕುತ್ತಿದ್ದಾರೆ. ಈ ಐನೂರು ಮಂದಿ ರೈತರು ಒಗ್ಗಟ್ಟಿನಿಂದ ಮೂಕ ಪ್ರಾಣಿಗಳನ್ನು ರಕ್ಷಿಸಲು ಗೋಶಾಲೆಯನ್ನು ಕಟ್ಟಿ ಗೋವುಗಳನ್ನು ಪೋಷಣೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಸಹಕಾರಿ ಬ್ಯಾಂಕ್ ಗಳುಪಶುಗಳ ನಿರ್ವಹಣೆಗೆ ಬೇಕಾದ ಸಲಕರಣೆ ಮತ್ತು ವೈದ್ಯಕೀಯ ಸೌಲಭ್ಯ, ಮೇವು ಮುಂತಾದವುಗಳನ್ನು ನೀಡಲಿದ್ದು, ಹಸುಗಳು ಮೃತಪಟ್ಟರೆ ಧಾರ್ಮಿಕ ಭಾವನೆಯಿಂದ ಕ್ರಮಬದ್ಧವಾಗಿ ಹೂಳುವಂತೆ ತಿಳಿಸಿದರು. ಈ ಸಂದರ್ಭ ಅಧ್ಯಕ್ಷ ಸಿ.ಎಂ.ಯಶವಂತ್, ಉಪಾಧ್ಯಕ್ಷರಾಗಿ ಟಿ.ಎಸ್.ವೀರೇಶ್, ನಿರ್ದೇಶಕ ಸಿ.ಜಿ.ಶಿವಶಂಕರ್, ಪ್ರಕಾಶ್, ಕೆಂಪಣ್ಣ ಮತ್ತು ಅನೇಕ ರೈತರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: