ಸುದ್ದಿ ಸಂಕ್ಷಿಪ್ತ

ಬಿ.ಇಡಿ ಕೋರ್ಸ್ ಗೆ ಅರ್ಜಿ ಆಹ್ವಾನ

2016-17ನೇ ಸಾಲಿನ ಎರಡು ವರ್ಷಗಳ ಬಿ.ಇಡಿ ಕೋರ್ಸ್ ಗೆ ರಾಜ್ಯ ಸರ್ಕಾರ ಹಾಗೂ ಸರ್ಕಾರದಿಂದ ಮಾನ್ಯತೆ ಪಡೆದ ಅನುದಾನಿತ ಹಾಗೂ ಅನುದಾನ ರಹಿತ ಬಿ.ಇಡಿ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳ ದಾಖಲಾತಿಗಾಗಿ ಅನ್ ಲೈನ್ ಮೂಲಕ ಅರ್ಜಿಗಳನ್ನು ಇಲಾಖೆಯ ವೈಬ್ ಸೈಟ್ www.schooleducation.kar.nic.in ರಲ್ಲಿ ಆಹ್ವಾನಿಸಲಾಗಿದ್ದು ನ.16 ಕೊನೆಯ ದಿನವಾಗಿದೆ.

ವೆಬ್ ಸೈಟ್ ಅಲ್ಲಿ ಜಿಲ್ಲಾವಾರು ಬಿ.ಇಡಿ ಶಿಕ್ಷಣ ಸಂಸ್ಥೆಗಳ ಪಟ್ಟಿ, ಅರ್ಹತೆ, ಮೀಸಲಾತಿ ವಿವರ ಹಾಗೂ ಇತರೆ ಸೂಚನೆಗಳನ್ನು ನೀಡಲಾಗಿದ್ದು, ಅಭ್ಯರ್ಥಿಗಳು ಕಡ್ಡಾಯವಾಗಿ ಅವುಗಳನ್ನು ಪಾಲಿಸಿ ಅರ್ಜಿಯನ್ನು ಕ್ರಮಬದ್ಧವಾಗಿ ಭರ್ತಿ ಮಾಡಬೇಕು ಎಂದು ಎನ್-27 ನೋಡಲ್ ಕೇಂದ್ರ ಮೈಸೂರು ಸರ್ಕಾರಿ ಶಿಕ್ಷಣ ಮಹಾವಿದ್ಯಾನಿಲಯದ ಪ್ರಾಂಶುಪಾಲ ಬಸವೇಗೌಡ ತಿಳಿಸಿದ್ದಾರೆ.

Leave a Reply

comments

Related Articles

error: