ಮೈಸೂರು

ಕೆ.ಎಸ್.ಓ.ಯು ಮಾನ್ಯತೆಗಾಗಿ ಆಗ್ರಹಿಸಿ ರಾಜ್ಯದಾದ್ಯಂತ ಹೋರಾಟಕ್ಕೆ ಸಿದ್ಧತೆ

ಮೈಸೂರು,ಸೆ.18 : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ಮಾನ್ಯತೆ ದೊರಕಿಸಿಕೊಳ್ಳಲು ಯು.ಜಿ.ಸಿ ಮತ್ತು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ರಾಜ್ಯದಾದ್ಯಂತ ಹೋರಾಟ ಮತ್ತಿತರೆ ತಂತ್ರವನ್ನು ಅನುಸರಿಸಲು ರಿಸೋರ್ಸ್ ಫಾರ್ ಕ್ರಿಯೆಟಿವ್ ಡೆಮಾಕ್ರಿಸಿ ನಿರ್ಧರಿಸಿದೆ.

ಗೋವರ್ಧನ ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ ಕೆ.ಎಸ್.ಓ.ಯು ಸಮಸ್ಯೆಗಳು ಮತ್ತು ಪರಿಹಾರ ಕುರಿತ ಹಳೆ ವಿದ್ಯಾರ್ಥಿಗಳು, ದೂರ ಶಿಕ್ಷಣ ಅಭಿಮಾನಗಳು ಸಭೆ ನಡೆಸಿ ಯುಜಿಸಿ ತಾರತಮ್ಯ ನೀತಿಯನ್ನು ಖಂಡಿಸುವುದು, 2017-18ನೇ ಕ್ಕೆ ಮಾನ್ಯತೆ ನೀಡಿ ವಿವಿ ಮೇಲೆ ಮೂಡಿರುವ ಕೆಟ್ಟ ಅಭಿಪ್ರಾಯವನ್ನು ಹೋಗಲಾಡಿಸುವುದಕ್ಕೆ ಹೋರಾಟದ ಮೂಲಕ ಜಾಗೃತಿಗೊಳಿಸಲು ಸಭೆಯಲ್ಲಿ ನಿರ್ಣಯಿಸಿತು.

ವಿವಿಗೆ 2013-14ನೇ ಸಾಲಿನಲ್ಲಿ ಮಾನ್ಯತೆ ರದ್ದಾಗಿದ್ದು ಯು.ಜಿ.ಸಿ. ವಿಷಯ ತಜ್ಞರ ತಂಡ ಬೇಟಿ ನೀಡಿದ ನಂತರ ಅವರ ನಿರ್ದೇಶನವನ್ನು  ಪಾಲಿಸಿ ವಿಧಿವತ್ತಾಗಿ 2016ರ ಫೆ.16ರಂದು ನೀಡಿದ ಮನವಿಯನ್ನು ಮನ್ನಿಸದ ಯುಜಿಇಸ 2017-18ನೇ ಸಾಲಿನ ಮಾನ್ಯತೆ ನೀಡದಿರುವುದು ಖಂಡನಾರ್ಹವಾಗಿದ್ದು ಸಭೆಯು ಪ್ರಬಲವಾಗಿ ವಿರೋಧಿಸಿತು.

ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೂ ಈ ಬಗ್ಗೆ ಗಮನ ಸೆಳೆಯಲು ಸಂಘವು ನಿರ್ಧರಿಸಿತು. ಸಭೆಯಲ್ಲಿ ಎ.ಎನ್.ಪದ್ಮಾಕ್ಷಿ, ಡಾ.ಡಿ.ಎ.ಉಪಾಧ್ಯ, ಡೀನ್ ಅಲ್ಲಮ್ಮ ಪ್ರಭು ಮೊದಲಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು. (ಕೆ.ಎಂ.ಆರ್)

Leave a Reply

comments

Related Articles

error: