ಕರ್ನಾಟಕ

ಹಾನಗಲ್ ಕುಮಾರ ಮಹಾಸ್ವಾಮಿಗಳು ಕರ್ನಾಟಕದ ಕಾಂತಿ : ಗುರು ಪ್ರಭುಸ್ವಾಮಿ ಬಣ್ಣನೆ

ರಾಜ್ಯ(ಚಾಮರಾಜನಗರ)ಸೆ.18:-  20 ನೇ ಶತಮಾನದಲ್ಲಿ ಭಾರತ ಕಂಡ ಎರಡು ಮಹಾನ್ ಆಧ್ಯಾತಿಕ ಚೇತನಗಳಲ್ಲಿ ಸ್ವಾಮಿ ವಿವೇಕಾನಂದರು ಭಾರತದ ಶಕ್ತಿಯಾದರೆ ಹಾನಗಲ್ ಕುಮಾರ ಮಹಾಸ್ವಾಮಿಗಳು ಕರ್ನಾಟಕದ ಕಾಂತಿಯಾಗಿದ್ದರು ಎಂದು ಬೆಳಗಾಂನ ರುದ್ರಾಕ್ಷಿ ಮಠದ ಗುರು ಪ್ರಭುಸ್ವಾಮಿ ತಿಳಿಸಿದರು.

ಯಳಂದೂರು ಪಟ್ಟಣದ ಕಾರಾಪುರ ವಿರಕ್ತಮಠದಲ್ಲಿ ಹಮ್ಮಿಕೊಂಡಿದ್ದ ಹಾನಗಲ್ ಕುಮಾರ ಮಹಾಸ್ವಾಮಿಗಳ 150 ವರ್ಷದ ಜಯಂತಿ ನಿಮಿತ್ತ ಹಮ್ಮಿಕೊಂಡಿದ್ದ ಚಾಮರಾಜನಗರ ಜಿಲ್ಲಾ ದತ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. 1867 ರಲ್ಲಿ ಜನಿಸಿದ ಸ್ವಾಮಿಗಳು ರಾಜ್ಯ ಆಧ್ಯಾತ್ಮಿ ಶಕ್ತಿಯಾಗಿದ್ದರು. ಇಂದು ವಚನ ಸಾಹಿತ್ಯ ಪುಸಕ್ತ ರೂಪದಲ್ಲಿ ದಾಖಲಾಗಿದ್ದರೆ ಇದು ಹಾನಗಲ್ ಸ್ವಾಮಿಯ ಶ್ರಮವಿದೆ ಎಂದು ಫ.ಗು.ಹಳಕಟ್ಟಿಯವರೇ ಹೇಳಿದ್ದಾರೆ. ರಾಜ್ಯದಲ್ಲಿ ಇವರನ್ನು ವೀರಶೈವ ಮಹಾಸಭಾದ ಸಂಸ್ಥಾಪಕರೆಂದು ಮಾತನಾಡುತ್ತಾರೆ. ಆದರೆ ಅವರು 1909 ರಲ್ಲಿ ಜನಯೋಗ ಮಂದಿರವನ್ನು ಸ್ಥಾಪಿಸಿ ಆ ಮೂಲಕ ಹಲವು ಸ್ವಾಮಿಗಳಿಗೆ ತರಬೇತಿ ನೀಡಿದ್ದರು. ಇಂದಿನ ನಡೆದಾಡುವ ದೇವರೆಂದೆ ಪ್ರಸಿದ್ದಿ ಪಡೆದಿರುವ ಸಿದ್ದಗಂಗಾ ಮಠದ ಶಿವಕುಮಾರಸ್ವಾಮಿಜಿ ರವರು ಕೂಡ 6 ತಿಂಗಳು ಇಲ್ಲೇ ತರಬೇತಿ ಪಡೆದಿದ್ದರು ಎನ್ನುವ ಬಗ್ಗೆ ಸ್ವತಃ ಅವರೇ ಮಾಹಿತಿ ನೀಡಿದ್ದಾರೆ. ಶಿಕ್ಷಣದಲ್ಲಿ ಶೇ. 75 ರಷ್ಟು ಆಧ್ಯಾತ್ಮದ ವಿಷಯಗಳನ್ನು ಮಕ್ಕಳಿಗೆ ತಿಳಿಸಿಕೊಡಬೇಕು. ಇದರಿಂದ ನಮ್ಮ ಸಂಸ್ಕೃತಿಯ ಅರಿವಾಗುತ್ತದೆ. ಶೇ. 25 ರಷ್ಟು ಮಾತ್ರ ವ್ಯವಹಾರಿಕ ಶಿಕ್ಷಣ ನೀಡುವಂತೆ ಮಂತ್ರಿಗಳಲ್ಲಿ ಮನವಿ ಮಾಡಲಾಗಿದೆ. ಯಳಂದೂರಿನ ಕಾರಾಪುರ ವಿರಕ್ತಮಠದ ಬಸವಲಿಂಗಸ್ವಾಮಿಗಳ ಬಳಿಯಲ್ಲೇ ಹಾನಗಲ್ ಸ್ವಾಮಿಗಳು ಕೆಲವು ವರ್ಷ ಕಳೆದಿದ್ದರು. ತಾಲೂಕಿನ ಯರಗಂಬಳ್ಳಿ ಗ್ರಾಮದಲ್ಲಿರುವ ಮುಪ್ಪಿನ ಷಡಕ್ಷರಿಗಳ ಗದ್ದುಗೆ ತೀವ್ರ ಹದಗೆಟ್ಟ ಸ್ಥಿತಿಯಲ್ಲಿದ್ದು ಈ ಭಾಗದವರು ಅದನ್ನು ಉಳಿಸಿಕೊಂಡು ಅಭಿವೃದ್ಧಿ ಪಡಿಸುವತ್ತ ಗಮನ ಹರಿಸಬೇಕೆಂದು ಮನವಿ ಮಾಡಿದರು.

ಕಾರಾಪುರ ವಿರಕ್ತ ಮಠದ ಬಸವರಾಜಸ್ವಾಮಿಜಿ, ವೀರಶೈವ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಪ್ರಕಾಶ್, ಪ್ರಭುಶಂಕರ ಇತರರು ಇದ್ದರು. (ಜಿ.ಎನ್,ಎಸ್.ಎಚ್)

Leave a Reply

comments

Related Articles

error: