ಮೈಸೂರು

ನ.2 ರಿಂದ 4ರವರೆಗೆ ಬಿ.ಎಸ್.ಎನ್.ಎಲ್ ನೌಕರರ ಸಮ್ಮೇಳನ

ಬಿ.ಎಸ್.ಎನ್.ಎಲ್ ಎಂಪ್ಲಾಯೀಸ್ ಯೂನಿಯನ್ ನ ಕರ್ನಾಟಕ ರಾಜ್ಯ ಮಟ್ಟದ 6ನೇಯ ಸಮ್ಮೇಳನವನ್ನು ನವೆಂಬರ್ 2 ರಿಂದ 4ರವರೆಗೆ ಮೂರುದಿನಗಳ ಕಾಲ ನಗರದ ಟಿ.ಕೆ.ಲೇಔಟ್ ನ ಆರ್.ಟಿ.ಟಿ.ಸಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

bsnlಸಂಘದ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿ ಪಿ.ಅಭಿಮನ್ಯು, ಉಪಮಹಾ ಕಾರ್ಯದರ್ಶಿ ಎಂ.ಸಿ.ಬಾಲಕೃಷ್ಣ, ಮುಖ್ಯ ಮಹಾ ಪೋಷಕ ವಿ.ಎ.ಎನ್.ನಂಬೂದರಿ, ಕರ್ನಾಟಕ ವಲಯದ ಅಧ್ಯಕ್ಷ ಬಿ.ಪಿ.ನಾರಾಯಣ, ವಲಯ ಕಾರ್ಯದರ್ಶಿ ಸಿ.ಕೆ.ಗುಂಡಣ್ಣ, ಹಣಕಾಸು ಕಾರ್ಯದರ್ಶಿ ಕೇಶವ್, ಸ್ವಾಗತ ಸಮಿತಿಯ ಅಧ್ಯಕ್ಷ, ಸಂಪಾದಕ ರಾಜಶೇಖರ ಕೋಟಿ ಸಮಾವೇಶದಲ್ಲಿ ಪಾಲ್ಗೊಳ್ಳುವರು, ರಾಜ್ಯದ ಇತರೆ ಜಿಲ್ಲೆಗಳ 500ಕ್ಕೂ ಹೆಚ್ಚು ಪ್ರತಿನಿಧಿಗಳು  ಭಾಗವಹಿಸುವರು.

ಸಮಾರೋಪ ಸಮಾರಂಭದಲ್ಲಿ ಇಲಾಖೆಯ ಮುಖ್ಯ ಪ್ರಧಾನ ವ್ಯವಸ್ಥಾಪಕ ಪಿ.ನಾಗರಾಜ್, ಪ್ರಧಾನ ವ್ಯವಸ್ಥಾಪಕ ಅಗರವಾಲ್, ಮುಖ್ಯ ಪ್ರಧಾನ ವ್ಯವಸ್ಥಾಪಕ ಕೆ.ಎಲ್.ಜಯರಾಮ್ ಹಾಗೂ ಇಲಾಖೆಯ ಎಲ್ಲ ಪ್ರಮುಖ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಸಂಘದ ಜಿಲ್ಲಾಧ್ಯಕ್ಷ ಎನ್.ಬಸವರಾಜು, ಕಾರ್ಯದರ್ಶಿ ಎಂ.ಮಹದೇವಪ್ಪ ತಿಳಿಸಿದ್ದಾರೆ.

Leave a Reply

comments

Related Articles

error: